fbpx

ನಿರ್ದೇಶಕನಾಗುವ ದಾರಿಯಲ್ಲಿ ಸಾಗುತ್ತಿರುವ ಸಾಧಕ …

ವಿನಯ್ ಕುಮಾರ್ ಎಂ.ಎಸ್ ಮೂಲತಃ ಕೊಡಗಿನ ಮಡಿಕೇರಿ ಅವರಾಗಿದ್ದು, ಕಲಾವಿರಾಗಿ ಏನಾದರೂ ಸಾಧಿಸಲೇ ಬೇಕು ಎಂದು ಪಣ ತೊಟ್ಟು ಅದಕ್ಕಾಗಿ ಸದಾ ಪ್ರಯತ್ನಿಸುತ್ತಿರುವ ಯುವ ಪ್ರತಿಭೆ. ಎಂ ಕಾಂ ಸ್ನಾತಕೋತ್ತರ ಪದವಿ ಮುಗಿಸಿ, ಸಿನಿಮಾ ನಿರ್ದೇಶಕನಾಗಲು ಕನಸು ಹೊತ್ತು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. 

ಪದವಿಯ ಹಂತದಲ್ಲಿಯೇ ಇರುವಾಗ ಕೊಡಗಿನ ಪ್ರತಿಷ್ಠಿತ ರೆಸಾಟ್೯ ಒಂದರಲ್ಲಿ ಜನಪದ ನೃತ್ಯ ಹಾಗು ಸಂಗೀತದ ಕಲಾವಿದರಾಗಿ ಸೇವೆ ಸಲ್ಲಿಸಿದರು. ಸ್ಥಳೀಯ ವಾಹಿನಿಯಾದ ‘ಚಿತ್ತಾರ’ ವಾಹಿನಿಯಲ್ಲಿ ನಿರೂಪಕರಾಗಿ ಸೈ ಎನಿಸಿಕೊಂಡು, ಆಕಾಶವಾಣಿಯಲ್ಲೂ ನಿರೂಪಣೆ ಮಾಡಿದರು. ನಂತರ ‘ಕಿಡಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿ ಜಿಲ್ಲೆಯ ಜನರ ಮನ್ನಣೆ ಪಡೆದರು. ‘ಜಟಾಯು’ ಸಿನಿಮಾವನ್ನು ನಿರ್ದೇಶಿಸಿ ಜನರಿಂದ ಶಹಬಾಸ್ ಗಿರಿಯನ್ನು ಪಡೆದರು. ಹಾಡುಗಾರಿಕೆಯಲ್ಲೂ ಮೇಲುಗೈ ಸಾಧಿಸಿರುವ ಇವರು ಜಟಾಯು ಕಿರು ಚಿತ್ರದಲ್ಲೂ ಸುಮಧುರವಾದ ಗೀತೆಯನ್ನು ಬರೆದು, ರಚಿಸಿ, ಸಾಹಿತ್ಯವನ್ನೂ ಅವರೇ ಬರೆದಿದ್ದರು ಅದು ಮೆಚ್ಚುಗೆಗೆ ಕೂಡ ಪಾತ್ರವಾಗಿತ್ತು.

ದೂರದರ್ಶನದ ಜನಪ್ರಿಯ ಕಾರ್ಯಕ್ರಮ ‘ಮಧುರ ಮಧುರವೀ ಮಂಜುಳ ಗಾನ’ದಲ್ಲಿ ಹಾಡಿ ಪ್ರೇಕ್ಷಕರನ್ನು ಮನೋರಂಜಿಸಿದ್ದರು. ಇವರ ಯೂ ಟ್ಯೂಬ್ ಚಾನಲ್ ಆದ‌ ಗುಬ್ಬಿ ಕ್ರೀಯೇಶನ್ಸ್ ನಲ್ಲಿ ಹಲವಾರು ವೆಬ್ ಸಿರಿಸ್ ಗಳನ್ನು ನಿರ್ದೇಶಿಸಿದ್ದಾರೆ.  ಇತ್ತೀಚೆಗೆ ತೆರೆಕಂಡ ಕಿಶೋರ್ ಮೂಡಬಿದ್ರೆ ನಿರ್ದೇಶನದ ‘ಮಾಲ್ಗುಡಿ ಡೇಸ್ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಇವರು ಆರಂಭಿಸಿದ ಯೂಟ್ಯೂಬ್ ಚಾನಲ್ ಮೂಲಕ 60ರಿಂದ 70 ಮಂದಿ ಕಲಾವಿದರನ್ನು ಪರಿಚಯಿಸಿದ್ದಾರೆ. ಅವರ ಅಭಿನಯಕ್ಕೆ ಒಂದು ಒಳ್ಳೆಯ ವೇದಿಕೆಯೂ ದೊರೆಯಿತು. 

ಗುಬ್ಬಿ ಕ್ರಿಯೇಶನ್ಸ್ ತಂಡದಲ್ಲಿ ವಿನಯ್ ಕುಮಾರ್ ಅವರಿಗೆ ಸಹಕಾರಿಯಾಗಿ ರಂಜಿತ್ ಶೆಟ್ಟಿ, ಕಿಶೋರ್, ಕೌಶಿಕ್, ಅಕ್ಷಯ್ ಹಾಗು ಮತ್ತಿತರರು ಬೆಂಬಲವಿದ್ದು, ಮುಂದೆಯೂ ಹಲವಾ ಕಂಟೆಂಟ್ ಕೊಡಲಿದ್ದಾರೆ. ವಿನಯ್ ಅವರ ಕಿರುಚಿತ್ರವೊಂದಕ್ಕೆ ನೆಹೆರು ಯುವ ಕೇಂದ್ರದಿಂದ ‘ಸ್ವಚ್ಛ ಭಾರತ’ದ ಸಂದೇಶವಿದ್ದಿದ್ದಕ್ಕೆ ಪ್ರಶಸ್ತಿಯೂ ದೊರೆತಿದೆ. ನಟ ಹಾಗು ನಿರ್ದೇಶಕರಾದ ಉಪೇಂದ್ರ ಅವರಿಂದ ಪ್ರೇರೇಪಿತರಾಗಿ, ಸಾಧನೆಯ ಬೆನ್ನೇರಿ ಸಾಗುತ್ತಿರುವ ವಿನಯ್ ಕುಮಾರ್ ಅವರಿಗೆ ನಮ್ಮ ಸುದ್ದಿ ಸಂತೆ ವೆಬ್ ಸೈಟ್ ತಂಡದ ಹಾರೈಕೆ ಸದಾ ಇರುತ್ತದೆ.

error: Content is protected !!