ನಿರಾಶ್ರಿತರ ಮನೆ ತೆರವು ಮಾಡಲು ಕಾಲಾವಕಾಶ ನೀಡುವಂತೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ನಗರಸಭಾ ಆಯುಕ್ತರಲ್ಲಿ ಮನವಿ

2018ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಇಂದಿರಾ ನಗರ, ಚಾಮುಂಡೇಶ್ವರಿನಗರ,ಜ್ಯೋತಿನಗರದ ನಿವಾಸಿಗಳಿಗೆ ಮಾದಾಪುರದ ಜಂಬೂರಿನಲ್ಲಿ ಪುನರ್‌ವಸತಿಯನ್ನು ಕಲ್ಪಿಸಲಾಗಿದ್ದು ಅವರು ವಾಸ ಮಾಡುತ್ತಿದ್ದ ಹಳೆ ಮನೆಯನ್ನು ಕೆಡವಿ ಹಾಕಲು ನಗರಸಭೆ ವತಿಯಿಂದ ನೋಟಿಸ್ ಮಂಜೂರಾಗಿದ್ದು ಇದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ನಗರ ನಿವಾಸಿಗಳು ನಗರಸಭೆ ಆಯುಕ್ತರಾದ ರಾಮದಾಸ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಲಾಯಿತು ನೀರಿನ ಬಿಲ್ ಹಾಗೂ ಕಂದಾಯವನ್ನು ಕಛೇರಿಗೆ 7 ದಿನಗಳೊಳಗೆ ಪಾವತಿಸಲು ಗಡುವು ನೀಡಿದ್ದಾರೆ, ಆದರೆ ಎಲ್ಲಾ ಕೂಲಿ ಕಾರ್ಮಿಕರಾಗಿದ್ದು ಅಲ್ಲದೇ ಈ ಕೊರೋನಾ ಸಮಯದಲ್ಲಿ ಕೆಲಸವಿಲ್ಲದೇ ಉಟಕ್ಕೂ ಪರದಾಡುತ್ತಿರುವ ಸಂಧರ್ಭದಲ್ಲಿ ಏಕಾಏಕಿ ಹಲವು ವರ್ಷಗಳ ಕಂದಾಯ ಹಾಗೂ ನೀರಿನ ಬಿಲ್ ಬಾಕಿ ಪಾವತಿಸಬೇಕೆಂದರೆ ನಿರಾಶ್ರಿತರಿಗೆ ತುಂಬಾ ತೊಂದರೆಯಾಗುತ್ತದೆ. ಹಾಗೂ ಮನೆ ಕೆಡವಲು ಕನಿಷ್ಠ ಪಕ್ಷ 10,000 ದಿಂದ 15,000ರೂ/- ಖರ್ಚು ತಗುಲುತ್ತದೆ. ಆದ್ದರಿಂದ 3ತಿಗಳ ಮಟ್ಟಿಗೆ ಸಮಯವಕಾಶ ನೀಡಬೇಕೆಂದು ಕೇಳಿಕೊಳ್ಳಲಾಯಿತು.

ನಗರಸಭೆಯವರು 2018ರಲ್ಲಿ 94ಸಿ ಅಡಿಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರ ಕಂದಾಯ ಹಾಗೂ ನೀರಿನ ಬಿಲ್ ಪಾವತಿ ಮಾಡಲು ನಗರಸಭೆಗೆ ಬಂದಾಗ ಕಛೇರಿಯಲ್ಲಿ ಕಂದಾಯವನ್ನು ಸ್ವೀಕರಿಸಲಿಲ್ಲ. ಈಗ 2020ರವರೆಗೆ ಕಂದಾಯ ಹಾಗೂ ನೀರಿನ ಬಿಲ್‌ನ್ನು ನೀಡಬೇಕಾಗಿ ಮೌಖಿಕವಾಗಿ ಹೇಳುತ್ತಿದ್ದಾರೆ. ತಾವುಗಳು ಇದರ ಬಗ್ಗೆ ಪರಿಶೀಲನೆ ಮಾಡಿ ನಿರಾಶ್ರಿತರಾದ ನಮಗಳಿಗೆ ಮನೆ ಕೆಡವಲು ಮತ್ತು ಕಂದಾಯ ಪಾವತಿ ಮಾಡಲು ಮಾರ್ಚ್ ಕೊನೆಯ ವಾರದವರೆಗೂ ಕಾಲವಕಾಶ ನೀಡಬೇಕೆಂದು ಮನವಿ ಮಾಡಲಾಯಿತು 2018ರಲ್ಲಿ ಪ್ರಕೃತಿ ವಿಕೋಪ ನಡೆದ ನಂತರ ನಿರಾಶಿತರ ಮನೆ ಕಂದಾಯ ಹಾಗೂ ನೀರಿನ ಬಿಲ್ಲನ್ನು ತೆಗೆದುಕೊಳ್ಳದಂತೆ ವಿನಂತಿಸಲಾಯಿತು ಈ ಸಂದರ್ಭದಲ್ಲಿ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರವಿ ಗೌಡ. ಸದಸ್ಯರುಗಳಾದ ರೀಟಾ. ಲಿಲ್ಲಿ. ಕಸ್ತೂರಿ . ಕಲೀಮ್. ಸಂಧ್ಯಾ ಹಾಗೂ ನಗರ ನಿವಾಸಿಗಳು ಹಾಜರಿದ್ದರು

error: Content is protected !!