ನಿರಂತರ ಮಳೆಯಿಂದ ಮೂಡಿದೆ ಆತಂಕ; ಜನ ಜೀವನ ಅತಂತ್ರತೆಯತ್ತ

ಕೊಡಗಿನಲ್ಲಿ ಮಳೆ ತೀವ್ರತೆ ಪಡೆದುಕೊಂಡಿದೆ. ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬ್ರಹ್ಮಗಿರಿ ಬೆಟ್ಟದ ವ್ಯಾಪ್ತಿಯಲ್ಲಿನ ಜನಜೀವನ ಏರುಪೇರಾಗಿದೆ. ಜೀವ ಕೈಯಲ್ಲಿ ಹಿಡಿದುಕೂಂಡು ದಿನ ದೂಡುತ್ತಿದ್ದಾರೆ.

ಭಾಗಮಂಡಲ ದಿಂದ ಮಡಿಕೇರಿ ಮತ್ತು ಅಯ್ಯಂಗೇರಿ ನಡುವೆ ಇರುವ ತ್ರಿವೇಣಿ ಸಂಗಮದಲ್ಲಿ ಮೂರ್ತಿ ಅಡಗಗಳಷ್ಟು ನೀರಿನ ಮಟ್ಟ ಏರಿಕೆ ಕಂಡಿದ್ದು ವಾಹನ ಸಂಚಾರ ಸ್ಥಗಿತಗೊಂಡಿರುವ ಜೊತೆಗೆ ಚೇರಳ್ಗಾರ, ಸಣ್ಣಪುಲಿಕೋಟು, ದೊಡ್ಡದಾಗಿದ್ದು, ಅಯ್ಯಂಗೇರಿ, ಗ್ರಾಮಸ್ಥರು ಪರದಾಡುತ್ತಿದ್ದರೆ,ಇತ್ತು ಮೂರ್ನಾಡು, ನಾಪೋಕ್ಲು ನಡುವಿನ ಬೋಳಿಬಾಣೆ ಭಾಗದಲ್ಲಿ ಸಂಚಾರ ಅಸ್ಥವ್ಯಸ್ತಗೊಂಡು ಜನರು ಪರದಾಡುವಂತಾಗಿದ್ದೂ, ಹಲವು ಕೃಷಿ ಜಮೀನಿನ ಭಾಗಮಂಡಲ ಮುಳುಗಡೆಯಾಗಿದೆ.

ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ರಸ್ತೆ ತೆರವು ಮಾಡುತ್ತಿದ್ದ ಜೆಸಿಬಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಾತಾಳಕ್ಕೆ ತಲುಪಿದ್ದು ಮಂಗಳೂರು ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಪ್ರವಾಹ,ಗುಡ್ಢಕುಸಿತ ಮುಂದುವರೆದಿದೆ.

ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿನ ಲಕ್ಷ್ಮಣ ತೀರ್ಥ ನದಿ ಅಬ್ಬರಿಸಿದ್ದು ಹಲವು ಭತ್ತದ ಗದ್ದೆಗಳು ಜಲಾವೃತಗೊಂಢಿದೆ ಶ್ರೀ ಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ, ಬಾಳಲೆ, ನಿಟ್ಟೂರೂ ಪೊನ್ನಂಪೇಟೆ ವ್ಯಾಪ್ತಿಯಲ್ಲಿನ ಪ್ರದೇಶಗಳು ಪ್ರವಾಹ ಭೀತಿಯಲ್ಲೇ. ಜಿಲ್ಲೆಯ ಉಭಯ ಶಾಸಕರಾದ ಕೆ.ಜಿ ಬೋಪಯ್ಯ, ಅಪಚ್ಚು ರಂಜನ್ ಹೆದ್ದಾರಿಯ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡುತ್ತಿದ್ದಾರೆ ನಾಪೋಕ್ಲುವಿನಲ್ಲಿ ರಸ್ತೆ ಕುಸಿತ,ತೀವ್ರಗತಿಯಲ್ಲಿ ಮನೆ ಕುಸಿತದ ಬಗ್ಗೆ ವರದಿಯಾಗಿದೆ. ಇತ್ತ ಜಿಲ್ಲಾಡಳಿತ ಬಗ್ಗೆ ಪರಿಹಾರ ವಿಳಂಬ ವಾಗುತ್ತಿರುವ ಬಗ್ಗೆ ಸಂತ್ರಸ್ಥರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಯ ಬಳಿಕ ಪರಿಹಾರ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.

error: Content is protected !!