ನಿರಂತರ ಭೂಕುಸಿತದಿಂದ ಆತಂಕ

ಕೊಡಗಿನ ಬಹುತೇಕ ಕಡೆಯಲ್ಲಿ ಮಳೆ ಶಾಂತವಾದರೂ ಭೂಕುಸಿತ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
ಕೊಡಗು ಕೇರಳ ಗಡಿ ಕರಿಕೆ ಗ್ರಾಮದಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿದೆ.
ಭಾಗಮಂಡಲ ಕರಿಕೆ ಕೇರಳದ ಕಾನಂಗಾಡ್ ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಅದರಲ್ಲೂ ಕರಿಕೆ ಮತ್ತು ಭಾಗಮಂಡಲ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಗಿಂದಾಗ್ಗೆ ಬರೆ ಕುಸಿತ ಉಂಟಾಗುತ್ತಿದೆ.
ಈ ಭಾಗದ ಬಾಚಿಮಲೆ ಎನ್ನುವಲ್ಲಿ ಹೆಚ್ಚು ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಸಹ ಕಡಿತಗೊಂಡಿದೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಆಗಮಿಸಿ, ಮತ್ತು ಪರಿಶೀಲಿಸಿ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.