ನಿಯಂತ್ರಣ ತಪ್ಪಿ ಕೊಡಗು ಗಡಿಯಲ್ಲಿ ಅಪಘಾತಕ್ಕೀಡಾದ ಬಸ್ಸು!

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ರಸ್ತೆ ಬಿಟ್ಟು ಪಕ್ಕದ ತೊಡಿಗೆ ಇಳಿದು ಅಪಘಾತಕ್ಕೆ ಈಡಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಸಂಪಾಜೆ ಬಳಿ ನಡೆದಿದೆ.

ಇಲ್ಲಿನ ಗಡಿಗಲ್ಲು ಎನ್ನುವಲ್ಲಿ ಧರ್ಮಸ್ಥಳದಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸುಳ್ಯ ದಾಟಿ ಕೊಡಗಿನ ಗಡಿ ಪ್ರವೇಶ ಪಡೆಯುತ್ತಿದ್ದಂತೆ ಘಟನೆ ಸಂಭವಿಸಿದೆ.

ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ 25 ಮಂದಿ ಸಿಲುಕಿಗೊಂಡಿದ್ದು, ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

error: Content is protected !!