ನಿಯಂತ್ರಣ ತಪ್ಪಿ ಲಾರಿ: ಅಪಾರ ಪ್ರಮಾಣದ ಹಾನಿ

ರಸ್ತೆ ಮಧ್ಯೆ ಕಿಡಿಗೇಡಿಗಳು ಇರಿಸಲಾಗಿದ್ದ ಕಲ್ಲನ್ನು ತಪ್ಪಿಸಲು ಹೋದ ಲಾರಿಯೊಂದು ರಸ್ತೆ ಬದಿಯ ಮನೆಯೊಳಗೆ ನುಗ್ಗಿದಲ್ಲದೆ, ಪಕ್ಕದ ಕೊಟ್ಟಿಗೆ ಹಾನಿಗೊಳಾಗುವುದರ ಜೊತೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ
ಶನಿವಾರಸಂತೆ ಸಮೀಪದ ಓಡೆಯನಪುರದಲ್ಲಿ ನಡೆದಿದೆ.

ಲಾರಿ ರಸ್ತೆ ಬದಿಯ ಮಲ್ಲೇಶ್ ಎಂಬುವವರ ಮನೆಗೆ ನುಗ್ಗಿದ್ದು ಮನೆಯಲ್ಲಿ ಟಿ.ವಿ ವೀಕ್ಷಿಸುತ್ತಿದ್ದ ವೃದ್ದ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಟ್ಟಿಗೆಗೆ ನುಗ್ಗಿದ ನಂತರ ಮನೆಗೆ ಅಪ್ಪಳಿಸಿದ ಲಾರಿ ಪರಿಣಾಮ ಹಸುಗಳು ಸಿಲುಕಿಕೊಂಡಿದ್ದು ಅಕ್ಕಪಕ್ಕದವರ ನೆರವಿನಿಂದ ಹಸುಗಳನ್ನು ರಕ್ಷಿಸಲಾಗಿದೆ.

ಉಡುಪಿ ನೊಂದಣಿ ಹೊಂದಿರುವ ಲಾರಿ ಇದಾಗಿದ್ದು
ಕುಶಾಲನಗರದಿಂದ ಸಕಲೆಶಪುರಕ್ಕೆ ತೆರಳುತ್ತಿತ್ತು. ಘಟನೆಯಲ್ಲಿ ಚಾಲಕ ಸಂತೋಷ್ ಗೆ ಸಣ್ಣಪುಟ್ಟಗಾಯಗಳಾಗಿದ್ದು, ಶನಿವಾರಸಂತೆಯ ಆಸ್ಪತ್ರೆಗೆ ದಾಖಲುಮಾಡಲಾಗಿದೆ.

error: Content is protected !!