ನಿಯಂತ್ರಣ ಕ್ಕೆ ಬಾರದ ಕೊರೊನಾ, ಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ನಿಷ್ಕ್ರಿಯ

ಜಿಲ್ಲೆಯ ಗಡಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾನೂನು ಬಾಹಿರ ಚಟುವಟಿಕೆ ಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ವತಿಯಿಂದ ಲಕ್ಷಾಂತರ ರೂಪಯಿ ವೆಚ್ಚದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ದ ಪರದೆ ಕೆಟ್ಟು ಹೋಗಿ ವರ್ಷಗಳೆ ಕಳೆದರೂ ಇನ್ನೂ ದುರಸ್ತಿ ಮಾಡದಿರುವುದು ಗಡಿಯಲ್ಲಿ ಭದ್ರತಾ ಲೋಪಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಅಕ್ರಮ ಚಟುವಟಿಕೆ ಗೆ ಬ್ರೇಕ್ ಹಾಕಲು ಕರಿಕೆಯ ಚೆಂಬೇರಿ ತನಿಖಾ ಠಾಣೆಯ ಬಳಿ ಈ ಸಿಸಿ ಕ್ಯಾಮರಾಗಳ ನ್ನು ಅಳವಡಿಸಿದ್ದು ,ಇದೀಗ ಕೋವಿಡ್ ಚೆಕ್ ಪೋಸ್ಟ್ ಕೂಡ ಇಲ್ಲೇ ಸ್ಥಾಪಿಸಲಾಗಿದ್ದು ,ಕೆಲದಿನಗಳ ಹಿಂದೆ ಉಸ್ತುವಾರಿ ಸಚಿವರ ಅದ್ಯಕ್ಷ ತೆಯಲ್ಲಿ ನಡೆದ ಕೋವಿಡ್ ಹಾಗೂ ಪ್ರವಾಹ ಉಸ್ತುವಾರಿ ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯನವರು ಗಡಿಗಳಲ್ಲಿ ಸಿಸಿ ಕ್ಯಾಮರಾಗಳ ನ್ನು ಅಳವಡಿಸಿ ಅದರ ನಿಯಂತ್ರಣ ಜಿಲ್ಲಾಧಿಕಾರಿ ಅಥವಾ ಪೊಲೀಸ್ ವರಿಷಾಧಿಕಾರಿಗಳ ನೇತೃತ್ವದಲ್ಲಿ ನಡೆಸಬೇಕೆಂದು ಸೂಚನೆ ನೀಡಿದರೂ ಇದುವರೆಗೂ ಸಿಸಿ ಕ್ಯಾಮರಾಗಳ ಅಳವಡಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕ ರ ಅಸಮಾಧಾನಕ್ಕೆ ಕಾರಣವಾಗಿದೆ.ಅಲ್ಲದೆ ಈ ಭಾಗದಲ್ಲಿ ದಿನೇ ದಿನೇ ಕೋವಿಡ್ ಏರಿಕೆಯಾಗುತ್ತಿದ್ದು ನಿಯಂತ್ರಣ ಕ್ಕೆ ಬರುತ್ತಿಲ್ಲ.

error: Content is protected !!