fbpx

ನಿನಗೇ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ!

|ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ|

ಹೆಣ್ಣು ಅದೊಂದು ದೇವರ ಅದ್ಭುತ ಸೃಷ್ಟಿ. ದೇವರು ಎಂದೂ ಹೇಳಬಹುದು. ಪ್ರತಿಯೊಬ್ಬ ಮನುಷ್ಯನಾ ಜೀವನದಲ್ಲೂ ಕೂಡ ಹೆಣ್ಣಿನ ಪಾತ್ರ ಮಹತ್ವವಾಗಿರುತದೆ.
ಭಾರತೀಯರಾದ ನಾವು ಪ್ರತಿಯೊಂದರಲ್ಲೂ ಹೆಣ್ಣನ್ನು ಗೌರವಿಸುವ ವಿಶಾಲ ಹೃದಯವಂತರು. ನಾವು ಯಾವುದರಲ್ಲಿ ಹೆಣ್ಣನ್ನು ಕಂಡಿಲ್ಲ
ನಮ್ಮ ದೇಶವನ್ನು ಭಾರತಮಾತೇ ಎಂದೂ, ಕರ್ನಾಟಕವನ್ನು ತಾಯಿ ಭುವನೇಶ್ವರಿಯ ಕೃಪೆ ಎಂದೂ, ನಮ್ಮ ಕೊಡಗನ್ನು ಕಾವೇರಿ ಮಾತೆಯ ವರಪ್ರಸಾದ ಎಂದೂ ಹೀಗೆ ಪ್ರತಿಯೊಂದರಲ್ಲೂ ಹೆಣ್ಣನ್ನು ಕಾಣುವವರು ನಾವು.

ಆದರೆ ಪ್ರಸ್ತುತ ಸಮಾಜದಲ್ಲಿ ಹೆಣ್ಣನ್ನು ಕೇವಲ ಬೋಗದ ವಸ್ತುವಿನಂತೆ ಕಾಣುವ ಕಣ್ಣುಗಳು ಹೆಚ್ಚಾಗಿವೆ.

ಒಮ್ಮೆ ಒಂದು ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವ ಮುನ್ನಾ ಯೋಚಿಸಿ….

ಅವಳ ಸ್ಥಾನದಲ್ಲಿಯೇ ನಿಮ್ಮ ಅಕ್ಕ /ತಂಗಿ ಇದ್ದರೆ ಇಂತಹ ಹೀನ ಯೋಚನೆ ನಿಮ್ಮಲ್ಲಿ ಬರುತಿತ್ತೇ.

ಚಿಕ್ಕಬಟ್ಟೆ ಧರಿಸಿರುದರಿಂದ ನೀವು ಅವಳು ಕೆಟ್ಟವಳು ಎನ್ನುವುದಾದರೆ, ಅದು ಅವಳ ಹಕ್ಕು, ಇಷ್ಟ, ಅಥವಾ ಅವಳ ವಯುಕ್ತಿಕ ಭಾವನೆ ಎಂದು ಅವಳನ್ನು ಗೌರವಿಸಬಹುದು ಅಲ್ಲವೇ.

ಹೆಣ್ಣು ಸಮಾಜದ ಕಣ್ಣು. ಹೆಣ್ಣು ಪ್ರತಿಯೊಬ್ಬರ ಜೀವನದಲ್ಲೂ ನೋವನ್ನು ಮರೆತು ಜನ್ಮ ನೀಡುವ ತಾಯಿಯಾಗಿ,ತನ್ನ ಸಾಂತ್ವನದ ಮಾತುಗಳ ಮೂಲಕ ನಮ್ಮ ಕಷ್ಟಗಳಿಗೆ ಹೆಗಲಾಗುವ ಅಕ್ಕನಾಗಿ, ತನ್ನ ಮುಗ್ದ ನಗು, ಮಾತುಗಳ ಮೂಲಕ ನೋವನ್ನು ಮರೆಸುವ ತಂಗಿಯಾಗಿ, ವಿದ್ಯೆ ನೀಡುವ ಗುರುವಾಗಿ, ಸಹಾಯ ಮನೋಭಾವದ ಗೆಳತಿಯಾಗಿ,ಮನವನರಿಯುವ ಪ್ರೇಯಸಿಯಾಗಿ, ಕಷ್ಟ ಸುಖಗಳ ಪಾಲುದಾರಳಾದ ಹೆಂಡತಿಯಾಗಿ, ನೀತಿಪಾಠ ಹೇಳುವ ಅಜ್ಜಿಯಾಗಿ ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುವವಳು ಹೆಣ್ಣು.

ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಇಂತಹ ವೀರ ನಾರಿಯರಿಂದ ಹಿಡಿದು ಮದರ್ ತೆರೇಸಾ, ಕಲ್ಪನಾ ಚಾವ್ಲ, ಸಾಲು ಮರದ ತಿಮ್ಮಕ್ಕ ರಂತಹ ಅತ್ಯುತ್ತಮರು ಕೂಡ ಹೆಣ್ಣೇ.

ಸ್ತ್ರೀ ಸಾಧಕರು ನಮ್ಮ ನಡುವೆಯೂ ಇರುತ್ತಾರೆ ನಾವು ಅವರನ್ನು ಗಮನಿಸುದಿಲ್ಲ ಅಷ್ಟೇ. ಅಂತಹ ಸಾಧಕರು ಯಾರಿದ್ದಾರೆ ಎನ್ನುತ್ತೀರಾ??
ಆಟೋ ರಿಕ್ಷಾ ಚಾಲಕರಾಗಿ ದುಡಿಯುತಿರುವವರು, ದರ್ಜಿಗಳಾಗಿ, ಶಿಕ್ಷಕರಾಗಿ, ಸರ್ಕಾರಿ ನೌಕರರಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ(ಹೆಣ್ಣು)ಯರ ಸಾಧನೆ ಹೇಳಲಸಾಧ್ಯ…

ಈ ಲೇಖನದ ಮೂಲಕ ಎಲ್ಲರಲ್ಲೂ ಕೇಳಿಕೊಳ್ಳುದಿಸ್ಸ್ಟೇ
ದಯವಿಟ್ಟು ಹೆಣ್ಣನ್ನು ಗೌರವಿಸಿ. ಹೆಣ್ಣನ್ನು ದೇವರು ಎನ್ನುವ ಪವಿತ್ರ ಸಂಸ್ಕೃತಿ ನಮ್ಮದು. ಎಲ್ಲಿ ಸ್ತ್ರೀಯರನ್ನು ಗೌರವಿಸುವರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಪುಣ್ಯವಾಕ್ಯವನ್ನು ಜಗತ್ತಿಗೆ ಸಾರಿದ ಭವ್ಯನೆಲವಿದು ಭಾರತ.

ಭಾರತದಲ್ಲಿ ಈಗೀಗ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳಂತಹ ಹೀನ ಕೃತ್ಯಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಅತ್ಯಾಚಾರಕ್ಕೆ ಪ್ರಮುಖ ಕಾರಣ ಹೆಣ್ಣುಮಕ್ಕಳ ಮೇಲೆ ಗೌರವ ಇಲ್ಲದಿರುವುದು. ನಮಗೆ ನಿಜವಾಗಿಯೂ ಹೆಣ್ಣಿನ ಮೇಲೆ ಗೌರವವಿದ್ದರೆ ಅತ್ಯಾಚಾರ ಹೋಗಲಿ, ಹೆಣ್ಣಿನ ಬಗ್ಗೆ ಕೆಟ್ಟ ಭಾವನೆಯೂ ಬರುದಿಲ್ಲ.
ಇನ್ನು ಅತ್ಯಾಚಾರಗಳಂತಹ ಹೀನ ಕೃತ್ಯಗಳಿಗೆ ಕಾರಣ ನಮ್ಮ ಕಾನೂನು ವ್ಯವಸ್ಥೆ ಸರಿಯಿಲ್ಲದಿರುವುದು. ನಮ್ಮ ದೇಶದ ಕಾನೂನು ವ್ಯವಸ್ಥೆ ಕಠಿಣವಾಗಿದ್ದರೆ ಇಂತಹ ಕೃತ್ಯಗಳು ಮರುಕಳಿಸುದಿಲ್ಲವೇನೋ ಎಂದು ಅನಿಸುತ್ತದೆ.

ಅತ್ಯಾಚಾರ ನಿರ್ಮೂಲನೆ ಆಗಬೇಕು ಎಂದು ಎಲ್ಲರೂ ಯೋಚಿಸುತ್ತಾರೆ.ಆದರೆ ಒಮ್ಮೆ ಇತ್ತ ಗಮನ ಹರಿಸಿ

ಆಟದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕಾಗಿ ಆಟಗಾರನ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕುವ ಕೀಳು ಮಟ್ಟದ ಜನರು ನಮ್ಮಲ್ಲಿರುವಾಗ,

ಪ್ರೀತಿ, ಪ್ರೇಮದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ತಮ್ಮ ತೆವಲಿಗೆ ಉಪಯೋಗಿಸುವ ಜನರು ನಮ್ಮಲ್ಲಿರುವಾಗ,

ಎಲ್ಲಿ ಹೆಣ್ಣನ್ನು ಗೌರವಿಸಬೇಕು ಎಂದು ಕಳಿಸುತ್ತಾರೋ ಅಂತಹ ಪವಿತ್ರ ಸ್ಥಳಗಳಲ್ಲಿ ಹೆಣ್ಣಿನ ಮಾನ ಹರಣ ಮಾಡಿ ಧರ್ಮಕ್ಕೆ ಕಳಂಕ ತರುವ ಪೂಜ್ಯರು ಎನಿಸಿಕೊಂಡಿರುವ ಕಾಮಕ್ರಿಮಿಗಳು ನಮ್ಮಲ್ಲಿರುವಾಗ,

ಹೀಗೆ ಪ್ರತಿಯೊಂದರಲ್ಲೂ ಹೆಣ್ಣನ್ನು ಕೀಳಾಗಿ ನೋಡುವ ಜನರು ನಮ್ಮ ಮದ್ಯೆಯೇ ಇರಬೇಕಾದರೆ ಅತ್ಯಾಚಾರ, ಸ್ತ್ರೀಶೋಷಣೆ ಇತ್ಯಾದಿಗಳ ಅಂತ್ಯ ಯಾವಾಗ???…
ಇಂತಹ ಕೃತ್ಯಗಳಿಗೆ ಮುಖ್ಯ ಕಾರಣ ನಾವು –ನೀವೆಲ್ಲರೂ ಸಹ. ನಾವು ಪಕ್ಕದ ಮನೆಯಲ್ಲಿ ಹೆಣ್ಣುಮಕ್ಕಳು ಶೋಷಣೆಗೆ ಒಳಗಾದರೆ ಮೊದಲು ನಮ್ಮ ಮನೆ ಹೆಣ್ಣುಮಕ್ಕಳು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುತ್ತೇವೆಯೇ ಹೊರತು ಆ ಹೆಣ್ಣುಮಗುವಿಗಾದ ತೊಂದರೆಯ ವಿರುದ್ಧ ಧ್ವನಿ ಎತ್ತುವುದೇ ಇಲ್ಲ.
ಪಕ್ಕದ ರಾಜ್ಯಗಳಲ್ಲಿ /ನಮ್ಮ ಜಿಲ್ಲೆ/ತಾಲೂಕು ಇನ್ನಾವುದೇ ಸ್ಥಳಗಳಲ್ಲೂ ಅತ್ಯಾಚಾರ ನಡೆದರೂ ದೊಡ್ಡ ಕ್ರಾಂತಿಕಾರಿಗಳಂತೆ JUSTICE FOR ಎಂದು ಸ್ಟೇಟಸ್ ಹಾಕುತ್ತೇವೆಯೇ ಹೊರತು ಅತ್ಯಾಚಾರಕ್ಕೆ ಕಠಿಣ ಕಾನೂನುಕ್ರಮಕ್ಕೆ ಆಗ್ರಹಿಸುದೇ ಇಲ್ಲ..
ಚಿಕ್ಕ ಬಟ್ಟೆ ಧರಿಸುವುದು ಮೊದಲಾದ ಕಾರಣಗಳು ಅತ್ಯಾಚಾರಕ್ಕೆ ಕೇವಲ ನೆಪಗಳಸ್ಟೇ. ನಮ್ಮ ಮನಸ್ಥಿತಿ ಚೆನ್ನಾಗಿದ್ದರೆ ಇಂತಹ ಘಟನೆಗಳಿಗೆ ನಮ್ಮ ಸಮಾಜದಲ್ಲಿ ಜಾಗವೇ ಇರುವುದಿಲ್ಲ ಅಲ್ಲವೇ..

ಗೌರವಿಸು ಹೆಣ್ಣನ್ನು
ನೋಯಿಸದಿರು ಅವಳ ಮನವನ್ನು

ಕೆಟ್ಟ ದೃಷ್ಟಿಯಲ್ಲಿ ನೋಡದಿರು ಅವಳನ್ನು
ಮತ್ತೊಂದು ಮನೆಯ ಮಗಳವಳು
ಮನೆ ಬೆಳಗುವ ಬೆಳಕವಳು…

 ಪ್ರತೀಕ್ ಪರಿವಾರ,ಮರಗೋಡು

error: Content is protected !!