ನಿಟ್ಟೂರಿನಲ್ಲಿ ಕಸವಿಲೇವಾರಿ ಘಟಕಕ್ಕೆ ಭೂಮಿಪೂಜೆ

ನಿಟ್ಟೂರು ಗ್ರಾಮದಲ್ಲಿ ಸ್ವಚ್ಛ ಗ್ರಾಮ ಅನುದಾನದಲ್ಲಿ ನೂತನವಾಗಿ 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಸ ವಿಲೇವಾರಿ ಘಟಕದ ಕಾಮಗಾರಿಗೆ ಇಂದು ನಿಟ್ಟೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಚಕ್ಕೇರ ಅಯ್ಯಪ್ಪ ಮತ್ತು ಉಪಾಧ್ಯಕ್ಷರಾದ ಪಡಿರಂಡ ಕವಿತಾಪ್ರಭು ಚಾಲನೆ ನೀಡಿದರು.

ಚಕ್ಕೇರ ಅಯ್ಯಪ್ಪವರು ಮಾತನಾಡಿ ಇಂದು ಭೂಮಂಡಳವನ್ನು ಕಾಡುತ್ತಿರುವ ಮಹಾ ಮಾರಿ ಪ್ಲಸ್ಟಿಕ್ ತ್ಯಾಜ್ಯ ವಸ್ತುಗಳಾಗಿದ್ದು ಜನ ಇಗಿನಿಂದಲೇ ಎಚ್ಚೆತ್ತುಕೊಂಡು ಈ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂಬರುವ ವರ್ಷಗಳಲ್ಲಿ ಮನುಕುಲವನ್ನು ಸೇರಿದಂತೆ ಎಲ್ಲಾ ಜೀವ ಜಂತುಗಳನ್ನು ಬೆಂಬಿಡದೆ ಕಾಡಲಿದೆಯೆಂದು ಎಚ್ಚರಿಕೆಯ ಮಾತನಾಡಿದರು, ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಪವಿತಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು.