fbpx

ನಿಜವಾದ ದೇಶ ಭಕ್ತಿ ಎಂದರೆ ಇದೇ ಅಲ್ವಾ!

ಬರಹ: ಹೇಮಂತ್‌ ಸಂಪಾಜೆ

ಕೊಡಗಿನ ಜನರ ರಕ್ತದಲ್ಲೇ ದೇಶ ಭಕ್ತಿ ಬೆರೆತಿದೆ ಎನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಉದಾಹರಣೆ ನೀಡಬಲ್ಲೆ. ಭಾರತೀಯ ಸೇನೆಯ ನಿವೃತ್ತ ಮೇಜರ್‌, ವೈದ್ಯ ಕುಶ್ವಂತ್ ಕೋಳಿಬೈಲು ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕೋರಿನಲ್ಲಿ ಐದು ವರ್ಷ ಕೆಲಸ ಮಾಡಿದವರು. ಇತ್ತೀಚೆಗಿನ ತನಕ ಪುಣೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಕೆಲಸ ಮಾಡಿದ್ದಾರೆ.

ವಿವಿಧ ರಾಜ್ಯಗಳಲ್ಲೂ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ತನ್ನ ಹುಟ್ಟೂರು ಕೊಡಗಿಗೆ ಕೆಲಸ ನಿರ್ವಹಿಸಲು ಆಗಮಿಸಿದ್ದಾರೆ. ಮೂಲತಃ ಭಾಗಮಂಡಲ ದವರಾದ ಕುಶ್ವಂತ್ ಮಡಿಕೇರಿಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಇನ್ನು ಮುಂದೆ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸಲಿದ್ದಾರೆ. ಒಂದು ಕಡೆ ಕೊಡಗಿನ ಜನ ಪ್ರಕೃತಿ ವಿಕೋಪ, ಕೊರೊನಾದಿಂದ ನಲುಗಿದ್ದಾರೆ, ಕೊಡಗಿನಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕುಶ್ವಂತ್ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದು ಅಚ್ಚರಿ ಎನಿಸುತ್ತದೆ, ಅವರಲ್ಲಿರುವ ವೃತ್ತಿಪರತೆ, ದೇಶ ಭಕ್ತಿಯನ್ನು ತೋರಿಸುತ್ತದೆ. ಮನಸ್ಸು ಮಾಡಿದ್ದರೆ ಕೈ ತುಂಬ ಸಂಬಳ ಸಿಗುವ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಹುದಿತ್ತು, ಆದರೆ ಕುಶ್ವಂತ್ ಹಾಗೆ ಮಾಡಲಿಲ್ಲ, ತನ್ನ ಜಿಲ್ಲೆಯ ಬಡವರಿಗಾಗಿ ಕಟ್ಟಲಾಗಿರುವ ಸರ್ಕಾರಿ ಆಸ್ಪತ್ರೆಗೆ ಬಂದು ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ದೊಡ್ಡ ಮನಸ್ಸು ಮಾಡಿದ್ದಾರೆ.

ಇಂತಹ ನಿರ್ಧಾರವನ್ನು ಇಂದಿನ ದಿನಗಳಲ್ಲಿ ಎಷ್ಟು ವೈದ್ಯರಿಂದ ನಿರೀಕ್ಷೆ ಮಾಡಲು ಸಾಧ್ಯ ಹೇಳಿ?, ಕುಶ್ವಂತ್ ಹಿಡಿದ ದಾರಿ ಸಾವಿರಾರು ವೈದ್ಯರಿಗೆ ಮಾದರಿಯಾಗಲಿ, ಇಂತಹ ಹೆಮ್ಮೆಯ ಪುತ್ರನಿಗೆ ಜನ್ಮ ನೀಡಿದ ಅವರ ತಾಯಿ ತುಳಸಿ ವನಮಾಲ ಮೇಡಂಗೆ ಕೋಟಿ ನಮನಗಳು. ಕುಶ್ವಂತ್ ಸರ್ ನಿಮ್ಮ ಸೇವೆಯನ್ನು ಕಾವೇರಿ ತಾಯಿ ಎಂದಿಗೂ ಮರೆಯಲಾರಳು.. ಒಳಿತಾಗಲಿ..

ಬರಹ: ಹೇಮಂತ್‌ ಸಂಪಾಜೆ

error: Content is protected !!