fbpx

ನಾ ಕಂಡ ಅತ್ಯಂತ ಆಗಿನ ಕಾಲದ ಸುಂದರ ಕೊಡಗು

ಅಂಜೇರಿರ ವಿಶು ರಾಘವಯ್ಯ

೧೯೯೧ ನೇ ಇಸವಿ ದಟ್ಟವಾದ ಅರಣ್ಯದಿಂದ ಕೂಡಿದ ನಮ್ಮ ನಾಡು ಅದ್ಭುತ, ಕೊಡಗಿನ ಮೂಲೆ ಮೂಲೆಗಳಲ್ಲಿ ಹಸಿರು ವೈಕರ್ಯ‌ ರಂಗು‌ ಚೆಲ್ಲಿ ಹಸಿರೇ‌ ಉಸಿರು ಎಂಬ ಆಗಿನ ಕಾಲದ ವೃದ್ದರ ಮಾತು ನೂರಕ್ನೂರು ಸತ್ಯ ಅಲ್ಲವೇ.

ಹೀಗಿರುವಾಗ ಜುಳ ಜುಳ ಶಬ್ದನೆಯ ಹೊಳೆ ಹರಿಯುವ ಸದ್ದು, ಚಿಲಿ ಪಿಲಿ ಸದ್ದು ಮಾಡುವ ಪಕ್ಷಿಗಳು, ತಂಪಾದ ಗಾಳಿ,‌ಇಂಪಾದ ಕೋಗಿಲೆ ಸದ್ದು , ವಾ ಅದೇನು ಹಸಿರು ತುಂಬಿದ ನಾಡು ಅಲ್ಲವೇ. ಈಗಿನ ಕಾಲ ಅಂದರೆ ೨೦೨೦ನೇ ಇಸವಿ ಅಂದರೆ ೨೯ ವರ್ಷಗಳ ಕಾಲಗಳ ನಂತರ ನಮ್ಮ ಕೊಡಗು ಹಸಿರು ತುಂಬಿದ ನಾಡು, ಹಾಳಾಗುತ್ತಿರುವುದು ಕೊಂಚ ಬೇಸರ ಮೂಡಿಸಿದೆ.

ಕೆಲವು ೧೦ ವರ್ಷಗಳಿಂದ ನಾವು ತಾಯ್ನಾಡಿನ ಹಸಿರನ್ನು‌ ಕೆಣಕಿರುವುದರಿಂದ ಅದರ ಪ್ರತಿಪಲ ನಿಜಕ್ಕೂ ಅಘೋರ ಎನ್ನಿಸಿದೆ, ಅಲ್ಲವೇ, ೨೦೧೮ ರಿಂದ ಪ್ರಾಕೃತಿಕ ಸಂದೇಶ ನಮಗೆ ಪ್ರತಿವರ್ಷವೂ ತರ ತರಹ ವಿಚಿತ್ರವಾದ ಅನುಭವ ಕೊಡುತ್ತಿರುವುದು‌ ಜನಗಳನ್ನು‌‌ ಹೆದರುಕೊಳ್ಳುವಂತಾಗಿದೆ.

ಆ ಕಾವೇರಿ ಮಾತೆ ದೇವನಲ್ಲಿ ಬೇಡಿ ಕೊಳ್ಳುವುದೇನೆಂದರೆ ಜನರು ಮಾಡಿದ ತಪ್ಪನ್ನು‌ ತನ್ನ ಹೊಟ್ಟೆಗೆ ಹಾಕಿಕೊಂಡು ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡು ಎಲ್ಲ ಮರು ಸ್ಥಿತಿಗೆ ತಂದು ನಮ್ಮ ಕೊಡಗನ್ನು‌ ರಕ್ಷಣೆ ಮಾಡಿ ನಮ್ಮ ಈಗಿನ ಕೊಡಗನ್ನು‌ ಆಗಿನ ಕೊಡಗನ್ನಾಗಿ ಬದಲಾವಣೆ ಆಗಲಿ ಎಂದು ನಾವೇಲ್ಲರೂ ದೇವನಲ್ಲಿ ಪ್ರಾರ್ಥಿಸೋಣ.

ಅಂಜೇರಿರ ವಿಶು ರಾಘವಯ್ಯ, ಆರೋಗ್ಯ ಇಲಾಖೆ ,‌ಕುಶಾಲನಗರ, ಕೊಡಗು
error: Content is protected !!