ನಾಳೆ ಮಳೆ ಹಾನಿ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ

ಆ.18ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಈ ಹಿಂದೆ ನಿಗದಿಯಾಗಿದ್ದ ಪ್ರವಾಸ ರದ್ದಾಗಿದ್ದ ಹಿನ್ನಲೆಯಲ್ಲಿ ನಾಳೆ ಕೊಡಗಿನ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ನೀಡಲಿದ್ದಾರೆ ಎಂದು ಕೊಡಗು ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾಹಿತಿ ನೀಡಿದ್ದಾರೆ.
ಬೆ.08:00 : ಮೈಸೂರಿನಿಂದ ನಿರ್ಗಮನ
ಬೆ.11:00 : ೨ನೇ ಮೊಣ್ಣಂಗೇರಿಗೆ ಭೇಟಿ ನೀಡಲಿದ್ದಾರೆ.
11:15 : ಕರ್ತೋಜೆ ವ್ಯಾಪ್ತಿಯ ಅಪಾಯಕಾರಿ ಸ್ಥಳ ಮತ್ತು ರಸ್ತೆ ಹಾನಿ ವೀಕ್ಷಣೆ ಮಾಡಲಿದ್ದಾರೆ.
ಬೆ.11:30 : ದೇವರಕೂಡ್ಲಿ ರಾಜ್ಯ ಹೆದ್ದಾರಿ ಹಾನಿ ವೀಕ್ಷಣೆ ಮಾಡಲಿದ್ದಾರೆ.
ಬೆ.11:45 : ಕೊಯನಾಡು ಕಿಂಡಿ ಅಣಿಕಟ್ಟು ಮತ್ತು ಆ ಭಾಗದ ಸಂತ್ರಸ್ತರ ಭೇಟಿ ನೀಡಲಿದ್ದಾರೆ.
ಮ.01:00 : ಡಿಸಿ ಕಚೇರಿ ತಡೆಗೋಡೆ ವೀಕ್ಷಣೆ ಮಾಡಲಿದ್ದಾರೆ.
ಮ.03:00 : ಪತ್ರಿಕಾಗೋಷ್ಠಿ ನಡೆಸಲಿದ್ದಾರೆ
ಸಂ.04:30: ಮಡಿಕೇರಿಯಿಂದ ಕುಶಾಲನಗರ ಮೂಲಕ ನಿರ್ಗಮಿಸಲಿದ್ದಾರೆ.