fbpx

ನಾಳೆ ಇಂಡೋ ಚೀನಾ ಮೂರನೇ ಸುತ್ತಿನ ಮಾತುಕತೆ

ಲಡಾಕ್ ಪ್ರಾಂತ್ಯದ ಗಡಿಯಲ್ಲಿ ಇಂಡೋ-ಚೀನಾ ನಡುವಣ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಈಗಾಗಲೇ ಎರಡು ದೇಶದ ನಡುವಣ ಸೇನೆಗಳ ಉನ್ನತ ಮಟ್ಟದ ಮಾತುಕತೆ ನಡೆದಿದೆ. ಎರಡು ಬಾರಿ ಈಗಾಗಲೇ ಇಂಡೋ-ಚೀನಾ ನಡುವಣ ಮಾತುಕತೆಯು ಚೀನಾದ ಮೊಲ್ಡೋದಲ್ಲಿ ನಡೆದಿದ್ದು, ನಾಳೆ ಭಾರತದ ಛೂಶುಲ್ ಭಾಗದಲ್ಲಿ ಸೇನೆಗಳ ನಡುವಣ ಮಾತುಕತೆ ನಡೆಯಲಿದೆ. ಈ ಉನ್ನತ ಮಟ್ಟದ ಸಭೆ ಹಾಗು ಮಾತುಕತೆಯಿಂದ ಗಡಿಯಲ್ಲಿ ಸೃಷ್ಟಿಯಾಗಿರುವ ಉದ್ವಿಘ್ನ ಸ್ಥಿತಿಯು ಶಮನವಾಗುವ ನಿರೀಕ್ಷೆಗಳು ಇವೆ.

error: Content is protected !!