ನಾಳೆಯಿಂದ ಬಸ್ ಸಂಚಾರ ಸುಗಮ

ಕೊಡಗು: ನಾಳೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಂಚಾರವು ಸುಗಮವಾಗಿ ವಾರದ ಏಳೂ ದಿನಗಳು ಸಾಗಲಿದೆ. ಎಲ್ಲಾ ಬಸ್ಸುಗಳು ಕೂಡ ಅವುಗಳ ದಿನ ನಿತ್ಯದ ಪ್ರಯಾಣಕ್ಕೆ ಕಾರ್ಯಾರಂಭಿಸಲಿದೆ. ಕೊರೋನಾ ಸೊಂಕಿನ ಭಯದಿಂದಾಗಿ ಈವರೆಗೆ ಸರಕಾರಿ ಬಸ್ಸುಗಳ ಸಾಗಾಟ ನಿಂತಿತ್ತು. ಆದರೆ ಇನ್ನು ಪ್ರಯಾಣಿಕರು ಪರದಾಟ ಪಡದಂತೆ ಎಲ್ಲಾ ಬಸ್ಸುಗಳ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ರಾತ್ರಿಯ ಬಸ್ ಸಂಚಾರಗಳೂ ಕೂಡ ಯಾವುದೇ ಆತಂಕವಿರದೆ ಮುಂದುವರೆಯಲಿದೆ ಎಂದು ಕೆ.ಎಸ್.ಆರ್.ಟಿ.ಸಿ ಮೂಲಗಳಿಂದ ತಿಳಿದು ಬಂದಿದೆ.