fbpx

ನಾಲೆಗೆ ನೀರು ಸ್ಥಗಿತ

ಕೊಡಗು(ಹಾರಂಗಿ): ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ಹಾರಂಗಿ ಜಲಾಶಯದ ಮುಖ್ಯನಾಲೆಗಳಿಗೆ ಇದೇ ತಿಂಗಳ 9 ರಿಂದ 10 ದಿನಗಳ ಕಾಲ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ಹಾರಂಗಿ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಖಾರೀಫ್ ಬೆಳೆಗಳಿಗೆ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮತ್ತು ಹಾರಂಗಿ ಅಚ್ಚುಕಟ್ಟು ಪ್ರದೇಶದ ಶಾಸಕರು ಹಾಗು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತಾರೀಖು 9 ರಿಂದ 18 ರ ವರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದು,19 ತಾರೀಖು ನಿಂದ ಅಕ್ಟೋಬರ್ 8 ರ ವರೆಗೆ ನೀರನ್ನು ಹರಿಸಲಾಗುವುದು,ಬಳಿಕ ಅಕ್ಟೋಬರ್ 9 ರಿಂದ 18 ರವರೆಗೆ ನೀರು ನಾಲೆಗೆ ಹರಿಸುವುದು ಸ್ಥಗಿತಗೊಳಿಸಿ ಮತ್ತೆ 20 ದಿನಗಳ ಬಳಿಕ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.

error: Content is protected !!