ನಾಪೋಕ್ಲು ಮನೆ ದರೋಡೆ ಪ್ರಕರಣ: ಐವರ ಬಂಧನ, ಮಾಲು ವಶ

ಮಡಿಕೇರಿ ತಾಲ್ಲೂಕು ನಾಪೋಕ್ಲು ಸಮೀಪದ ಕೊಳಕೇರಿಯ ಮೊಟೇರಿಯಲ್ಲಿ ವೃದ್ಧ ಮಹಿಳೆಯರು ವಾಸವಿದ್ದ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ನೇಪಾಳ ಮೂಲದ ಐವರನ್ನು ಬಂಧಿಸಿ,ಬಂಧಿತರಿಂದ ಕಳುವಾದ ಮಾಲನ್ನು ಮಡಿಕೇರಿಯ ಡಿಸಿಆರ್ ಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫೆಬ್ರುವರಿ 1 ರಂದು ಗ್ರಾಮದ ವೃದ್ದ ಮಹಿಳೆಯರು ವಾಸವಿದ್ದ ಮನೆಯ ಮುಂಬಾಗಿಲು ಒಡೆದು, ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನಗದು ಮತು ಚಿನ್ನಾಭರಣ ವನ್ನು ಲೂಟಿ ಮಾಡಲಾಗಿತ್ತು,ಜಾನಕಿ ಎಂಬುವವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡಿರುವ ಪೊಲೀಸರು ಜಿಲ್ಲೆಯ ವಿವಿದೆಡೆ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಿಲ್ ಬಹದ್ದೂರ್ ರಾವುಲ್ (54),ಈಶ್ವರ್ ಥಾಪಾ (48),ಪ್ರೇಮ್ ಕುಮಾರ್ ಖಡ್ಕಾ (30),ಸುದೀಪ್ ಜೆತಾರ(20) ಮತ್ತು ಮನೆಗೆಲಸ ಮಾಡಿಕೊಂಡಿದ್ದ ಕಮಲಾ ಸಿಂಗ್ (32) ಮಹಿಳೆಯನ್ನು ಬಂಧಿಸಿದ್ದು, ಬಂಧಿತರಿಂದ 99 ಗ್ರಾಂ ಚಿನ್ನಾಭರಣಗಳು,42 ಸಾವಿರ ನಗದು ಸೇರಿದಂತೆ 5,42,500 ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!