ನಾಪತ್ತೆಯಾದವ ಶವವಾಗಿ ಪತ್ತೆ

ಮೃತರಾಗಿರುವ ವಿ.ಕೆ ತಮ್ಮಯ್ಯ
ಕೊಡಗು: ಕೆಲವು ದಿನಗಳಿಂದ ಮೈತಾಡಿ ಗ್ರಾಮದ ವ್ಯಕ್ತಿಯೊಬ್ಬರು ಪಟ್ಟಣಕ್ಕೆ ಹೋಗಿ ಬರುತ್ತೇನೆಂದು ತೆರಳಿ ಮತ್ತೆ ನಾಪತ್ತೆಯಾಗಿದ್ದ.
ವ್ಯಕ್ತಿ ಇಂದು ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಗ್ರಾಮದ ಬೆಟ್ಟಮಕ್ಕಿ ನಿವಾಸಿ ವಿ.ಕೆ ತಮ್ಮಯ್ಯ(69) ತಮ್ಮದೇ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇತ್ತೀಚೆಗಷ್ಟೆ ಅಮ್ಮತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದರು. ಬಳಿಕ ಮನೆಯಲ್ಲೇ ಇದ್ದವರು ಕಳೆದ ಮಂಗಳವಾರ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಇವರ ಪತ್ನಿ ಮೃತಪಟ್ಟಿದ್ದರು.