ನಾಗರ ಹಾವಿನ ಸೂಪ್ ಮಾಡಲು ಹೋಗಿ ಸತ್ತ ಅಡುಗೆ ಮಾಡುವವನು!

ಹಾವು ಕಚ್ಚಿ ಅನೇಕರು ಸಾವನ್ನಪ್ಪುತ್ತಾರೆ. ಆದ್ರೆ ದಕ್ಷಿಣ ಚೀನಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುವ ವ್ಯಕ್ತಿಯೊಬ್ಬ ನಾಗರ ಹಾವಿನ ತಲೆ ಕತ್ತರಿಸಿದ್ದಾನೆ. ತಲೆ ಕತ್ತರಿಸಿ ಪಕ್ಕಕ್ಕಿಟ್ಟು, ಸೂಪ್ ಮಾಡಲು ತಯಾರಿ ನಡೆಸಿದ್ದ.

20 ನಿಮಿಷದ ನಂತ್ರ ಕತ್ತರಿಸಿದ್ದ ತಲೆಯನ್ನು ಎಸೆಯಲು ಕೈನಲ್ಲಿ ಹಿಡಿದಿದ್ದಾನೆ. ಆಗ ನಡೆದ ಘಟನೆ ಆಘಾತಕಾರಿಯಾಗಿದೆ.

ಕೈನಲ್ಲಿ ಹಿಡಿಯುತ್ತಿದ್ದಂತೆ ಅದು ಆತನಿಗೆ ಕಚ್ಚಿದೆ. ಹಾವು ಕಚ್ಚಿದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದಾನೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಫ್ಯಾಶನ್ ಸಿಟಿಯಲ್ಲಿ ವಾಸವಾಗಿರುವ ಬಾಣಸಿಗ, ಚೆಂಗ್ ಪೆಂಗ್, ಇಂಡೋ-ಚೈನೀಸ್ ಉಗುಳುವ ನಾಗರಹಾವಿನ ಮಾಂಸದ ಸೂಪ್ ತಯಾರಿಸುತ್ತಿದ್ದ. ಈ ವೇಳೆ ಘಟನೆ ನಡೆದಿದೆ. ಚೀನಾದಲ್ಲಿ ವಿಷಕಾರಿ ಹಾವಿನ ಮಾಂಸದ ಸೂಪ್ ಗೆ ಹೆಚ್ಚಿನ ಬೇಡಿಕೆಯಿದೆ.

ಸೂಪ್ ತಯಾರಿಸಲು ಹಾವಿನ ತಲೆ ಕತ್ತರಿಸಿದ್ದಾನೆ. ಸೂಪ್ ತಯಾರಿಸಲು 20 ನಿಮಿಷ ಹಿಡಿದಿದೆ. ನಂತ್ರ ಕಿಚನ್ ಕ್ಲೀನ್ ಮಾಡಲು ಶುರು ಮಾಡಿದ್ದಾನೆ. ಕಿಚನ್ ಕ್ಲೀನ್ ವೇಳೆ ಹಾವಿನ ತಲೆಯನ್ನು ಕಸಕ್ಕೆ ಹಾಕಲು ಮುಂದಾಗಿದ್ದಾನೆ. ಆಗ ಹಾವು ಕಚ್ಚಿದೆ.

ಹಾವು ಕಚ್ಚಿದ ತಕ್ಷಣ ಆತ ಕಿರುಚಾಡಿದ್ದಾನೆ. ತಕ್ಷಣ ವೈದ್ಯರನ್ನು ಕರೆಸಲಾಗಿದೆ. ಆದ್ರೆ ವೈದ್ಯರು ಬರುವ ಮೊದಲೇ ಆತ ಸಾವನ್ನಪ್ಪಿದ್ದ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!