ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ “ಭಾಗ್ ರಕ್ಷಕ್” 2021 ರ ಪ್ರಶಸ್ತಿ ಗೌರವ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ “ಭಾಗ್ ರಕ್ಷಕ್ 2021” ಪ್ರಶಸ್ತಿಗೆ ಪಾತ್ರವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಸಂಸ್ಥೆ (NTCA) ಹುಲಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂಧಿಗಳ ಕಾರ್ಯ ಪ್ರವೃತ್ತಿಗೆ ಮೆಚ್ಚಿ ಕೇಂದ್ರ ಐಜಿಎಫ್ ಡಾ.ಅಮಿತ್ ಮಾಲಿಕ್ ಪ್ರಶಂಸನೆ ವ್ಯಕ್ತ ಪಡಿಸಿದ್ದಾರೆ.

ಅಂತರಾಷ್ಟ್ರೀಯ ಹುಲಿ ದಿನಾಚರಣೆ ಸಂದರ್ಭ ಹುಲಿ ಸಂರಕ್ಷಣೆ ಕುರಿತ ಆಯ್ಕೆ ಪ್ರಕ್ರಿಯೆಯಲ್ಲಿ ಈ ಭಾರಿ ನಾಗರಹೊಳೆ ಅಭಯಾರಣ್ಯ ಆಯ್ಕೆಯಾಗಿದೆ.