ನಾಗರಹೊಳೆ ಹುಲಿ ರಕ್ಷಿತ ಅರಣ್ಯ ಪ್ರದೇಶದ ಆನಚೂಕೂರು ವನ್ಯಜೀವಿ ವಲಯದ ಮತ್ತಿಗೋಡಿನ ಅರಣ್ಯ ಸಿಬ್ಬಂಧಿಗಳು ಗಸ್ತಿನ ಸಂದರ್ಭ ಭಾರೀ ಗಾತ್ರದ ಹುಲಿಯ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸ್ಥಳದಲ್ಲೇ ಪಶುವೈದ್ಯಕೀಯ ವೈದ್ಯರಿಂದ ಹುಲಿಯ ಮಾದರಿ ಸಂಗ್ರಹ ಮಾಡಿದ ಬಳಿಕ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.