fbpx

ನರಕದ ಕೂಪ ಬಸವನಳ್ಳಿ ಕೋವಿಡ್ ಕೇಂದ್ರ

ಬಸವನಳ್ಳಿಯ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯಿಂದ ಕೂಡಿದೆ ಎಂದು ಸ್ವತಃ ಸೋಂಕಿತರು ಆರೋಪಿಸಿದ್ದಾರೆ.

ತಮಗೆ ನೀಡಲಾಗುವ ಹಾಸಿಗೆಯನ್ನು ತಾವೇ ಶುಚಿಗೊಳಿಸಬೇಕಾಗಿದ್ದು, ಶೌಚಾಲಯ ಗಬ್ಬು ನಾರುತ್ತಿದೆ. ಆಗಾಗೆ ನಾಯಿಗಳು ಕೇಂದ್ರದ ಒಳಗೆ ರೌಂಡ್ಸ್ ಹಾಕಿ ಕಸದ ಬುಟ್ಟಿಯಲ್ಲಿರುವ ಊಟದ ತಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ.

ಈ ಹಿನ್ನಲೆಯಲ್ಲಿ ತಾವೇ ಮನೆಯಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದು ಸೋಂಕಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ತಮ್ಮನ್ನು ಬಿಡುಗಡೆಗೊಳಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡತ್ತಿದ್ದಾರೆ. ಇತ್ತ 10 ದಿನ ಕ್ವಾರಂಟೈನ್ ನಲ್ಲಿ ಇದ್ದು ಬಂದ ಸುಂಟಿಕೊಪ್ಪದ ಗಣೇಶ್, ಅದೊಂದು ನರಕ ವೈದ್ಯರು ಸರಿಯಾಗಿ ನೋಡಿಕೊಳಾಳುವುದಿಲ್ಲ, ಬೇಜವಬ್ದಾರಿಯಿಂದ ವರ್ತಿಸುತ್ತಾರೆ. ಕಳಪೆ ಗುಣಮಟ್ಟದ ಆಹಾರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

error: Content is protected !!