fbpx

ನನ್ನ ಕೈವಾಡವಿದೆ ಎಂದು ಸಾಬೀತಾದರೆ, ದೇಶದ ಯಾವುದೇ ಮೂಲೆಯಲ್ಲಾದರೂ ಗಲ್ಲಿಗೇರಿಸಿ: ಫಾರೂಕ್ ಅಬ್ದುಲ್ಲಾ ಚಾಲೆಂಜ್

1990ರಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರಿ ಪಂಡಿತರ ಹತ್ಯೆ ಹಿಂದೆ ನನ್ನ ಕೈವಾಡವಿದೆ ಎಂದು ಸಾಬೀತಾದರೆ ನನ್ನನ್ನು ಗಲ್ಲಿಗೇರಿಸಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗುಡುಗಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರಿ ಫೈಲ್ಸ್ ಚಿತ್ರ ರಾಜಕೀಯ ಪಿತೂರಿ ಹೊಂದಿರುವ ಚಿತ್ರ.

ಕಾಶ್ಮೀರಿ ಪಂಡಿತರ ಹತ್ಯೆ ಹಿಂದೆ ನನ್ನ ಕೈವಾಡ ಇದೆ ಎಂದಾದರೆ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಗಲ್ಲಿಗೇರಿಸಿ ಎಂದು ಸವಾಲು ಹಾಕಿದ್ದಾರೆ.

ಪ್ರಾಮಾಣಿಕವಾಗಿ ತನಿಖೆ ನಡೆಸುವ ಸಮಿತಿ ಇದ್ದರೆ ಸತ್ಯ ಹೊರಗೆ ಬರಲಿದೆ. ಘಟನೆಗೆ ನಾನು ಕಾರಣ ಅಲ್ಲ ಎಂಬುದು ನನ್ನ ಅನಿಸಿಕೆ. ಜನರಿಗೆ ಸತ್ಯ ತಿಳಿಯಬೇಕಾದರೆ ತನಿಖಾ ಸಂಸ್ಥೆ ಮುಂದೆ ಹೋಗಲಿ ನನ್ನ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.

error: Content is protected !!