ನದಿ ಸ್ವಚ್ಛತೆಗೆ ಆದ್ಯತೆ ನೀಡಿ ಅಣಿಯಾದ ಪಟ್ಟಣ ಪಂಚಾಯ್ತಿ

ಜೀವನದಿ ಕಾವೇರಿ ನದಿಯನ್ನು ಮಲೀನ ಮಾಡುತ್ತಿರುವ ಸಂಬಂಧ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಪಟ್ಟಣ ಪಂಚಾಯ್ತಿಗೆ ನೀಡಿದ ದೂರಿನ ಅನ್ವಯ ಅಧಿಕಾರಿಗಳು ಮತ್ತು ಪೊಲೀಸರ ಸಹಾಯದಿಂದ ನದಿಯನ್ನು ಕಲುಷಿತ ಮಾಡುತ್ತಿದ್ದವರನ್ನು ತೆರವುಗೊಳಿಸುವ ಕಾರ್ಯ ನಡೆಯಿತು.

ನದಿಯಲ್ಲಿ ನೀರಿನ ಪ್ರಮಾಣ ಇಳಿಕೆ ಕಂಡಿರುವ ಹಿನ್ನಲೆಯಲ್ಲಿ ಈಜಾಡಲು, ವಾಹನ ತೊಳೆಯುವುದು, ಬಟ್ಟೆಗಳನ್ನು ಒಗೆಯುವ ಮೂಲಕ ಆಯಿಲ್, ಸೋಪು, ಎಲ್ಲಾ ಮಿಶ್ರಣಗೊಂಡು ಜೀವಸಂಕುಲದ ಜೊತೆ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿರುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದೆ.

error: Content is protected !!