fbpx

ನದಿ ಉಕ್ಕಿ ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತ

ಮಡಿಕೇರಿ ಮತ್ತು ಸುಳ್ಯ ನಡುವಿನ ಕಲ್ಲುಗುಂಡಿಯಲ್ಲಿ ಅಕ್ಷರಶಃ ಪ್ರವಾಹದ ಭೀತಿ ಎದುರಾಗಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ರಾಜ್ಯ ಹೆದ್ದಾರಿಗೆ ನೀರು ನುಗ್ಗಿದ ಪರಿಣಾಮ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿದೆ.

ಬಸ್ಸಿನ ಮೂಲಕ ಮಂಗಳೂರು ಕಡೆ ತಿರುಗುವವರು ಪರ್ಯಾಯ ಬಸ್ ಅವಲಂಭಿಸುವಂತಾಗಿದೆ. ಇತ್ತ ಮಡಿಕೇರಿ ಭಾಗದ ಮೊಣ್ಣಂಗೇರಿಯಲ್ಲೂ ಗುಡ್ಡ ಕುಸಿದಿರುವ ಪರಿಣಾಮ ಬೆರಳೆಣಿಕೆ ಬಸ್ಸು ಸಂಚಾರ ಮಾಡುತ್ತಿದ್ದು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಲ್ಲು ಬಂಡೆಗಳಿಂದ ಪಟ್ಟಣ ಕೆಸರಿನ ಗದ್ದೆಯಾಗಿದ್ದು, ದ್ವಿಚಕ್ರ ವಾಹನ ಸಹ ತೆರಳದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೊಯ್ನಾಡಿನಲ್ಲಿ 5, ಕಲ್ಲುಗುಂಡಿಯಲ್ಲಿ 20 ಮನೆ ಹಾನಿಯಾಗಿದೆ.

ಬಹುತೇಕ ಕಡೆಗಳಲ್ಲಿ ಅಡಿಕೆ ಮಳಿಗೆ, ಸಲೋನ್ , ಹೋಟೆಲ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿನಿಕ್, ವರ್ಕ್ ಶಾಪ್, ಮಾಂಸದ ಅಂಗಡಿ, ಜಲಾವೃತಗೊಂಡಿದೆ. ಕೆಲವೆಡೆ ಕಾರು, ಆಟೋಗಳು ಕೊಚ್ಚಿ ಹೋಗಿದೆ. ಹಾನಿಗೊಳಗಾದ ಮನೆಯ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ, ಇತರೆ ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಿ ಪರಿಹಾರ ನೀಡುವ ಭರವಸೆಯನ್ನು ಶಾಸಕ ಕೆ.ಜಿ ಬೋಪಯ್ಯ ನೀಡಿದ್ದಾರೆ.

error: Content is protected !!