ನಡೆಯುತ್ತಿದೆ ಉಭಯ ಪಟ್ಟಣ ಪಂಚಾಯ್ತಿಗಳಲ್ಲಿ ಚುನಾವಣಾ ಹಣಾಹಣಿ

ಸೋಮವಾರಪೇಟೆ, ವಿರಾಜಪೇಟೆಯಲ್ಲಿ ಪಟ್ಟಣ ಪಂಚಾಯ್ತಿ ಉಪ ಚುನಾವಣೆ ನಡೆಯುತ್ತಿದ್ದು, ತೆರವಾಗಿದ್ದ ಸ್ಥಾನಕ್ಕೆ ಈ ಉಪ ಚುನಾವಣೆ ಏರ್ಪಟ್ಟಿತು.
ಉಭಯ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ಜೋರಾಗಿದ್ದು, ಸೋಮವಾರಪೇಟೆಯ ಎರಡು, ವಿರಾಜಪೇಟೆಯಲ್ಲಿನ ಒಂದು ವಾರ್ಡ್ಗಾಗಿ ನಡೆಯುತ್ತಿರುವ ಚುನಾವಣೆ ಎಲ್ಲರ ಕುತೂಹಲ ಕೆರಳಿಸಿದೆ.

ಸೋಮವಾರಪೇಟೆ ಮತಗಟ್ಟೆಗೆ ಶಾಸಕ ಅಪಚ್ಚು ರಂಜನ್ ಭೇಟಿ ನೀಡಿ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ವಿರಾಜಪೇಟೆಯ ಮೀನುಪೇಟೆ ಕ್ಷೇತ್ರದಿಂದ ಬಿಬೆಪಿ ಮುಖಂಡ ಸುಜಾಕುಶಾಲಪ್ಪ ಪುತ್ರ ವಿನಾಕ್ ಕುಟ್ಟಪ್ಪ ಸ್ಪರ್ಧಿಯಾಗಿ ನಿಂತಿರುವುದು ಈ ಬಾರಿಯ ಉಪ ಚುನಾವಣೆಯ ವಿಶೇಷ ಸಂಗತಿಯಾಗಿದೆ.