ನಟಿ ಸೌಜನ್ಯ ಆತ್ಮಹತ್ಯೆಯ ಡೆತ್ ನೋಟ್ ಅಲ್ಲಿ ಏನಿತ್ತು?!

ಬೆಂಗಳೂರು, ಸೆ. 30: ಕನ್ನಡ ಕಿರುತೆರೆ ನಟಿ ಸೌಜನ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದೊಡ್ಡಬೆಲೆ ರಸ್ತೆಯ ಸನ್ ವರ್ತ್ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

ಕೊಡಗು ಮೂಲದ ಸೌಜನ್ಯ ಕೆಲವು ಕನ್ನಡ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದ್ದ ಸೌಜನ್ಯ, ಕನ್ನಡದ ಹಲವು ಧಾರವಾಹಿಗಳಲ್ಲಿ ನಟನೆ ಮಾಡುವ ಮೂಲಕ ಮನೆ ಮಾತಾಗಿದ್ದಳು. ಬೆಳಗ್ಗೆ ತನ್ನ ಆಪ್ತ ಸಹಾಯಕನಿಗೆ ತಿಂಡಿ ತರಲು ಹೇಳಿ ಕಳಿಸಿದ್ದಾಳೆ. ಆ ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಿಂಡಿ ತಂದು ನೋಡುವಷ್ಟರಲ್ಲಿ ಸೌಜನ್ಯ ಸಾವನ್ನಪ್ಪಿದ್ದು, ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ವೇಲ್ ನಿಂದ ನೇಣು ಬಿಗಿದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಪ್ಪಾ ಸಾರಿ ಎಂದು ಡೆತ್ ನೋಟ್ : “ನಾನು ಈ ಹಾದಿ ತುಳಿಯುತ್ತಿರುವುದಕ್ಕೆ ಕ್ಷಮಿಸಿ ಅಪ್ಪಾ.. ಪಪ್ಪಾ ಐ ಲವ್ ಯೂ ಸೋ ಮಚ್ .ಸಾರಿ ಮಮ್ಮೀ.. ನಾನು ನಾಳೆ ಊರಿಗೆ ಬರುತ್ತಿದ್ದೇನೆ ಎಂದು ಹೇಳಿದ್ದೆ. ಆದರೆ ಆದರೆ ಈ ರೀತಿ ಬರುತ್ತೇನೆ ಎಂದು ಊಹೆಯೂ ಮಾಡಿರಲಿಲ್ಲ. ಮಧು ಸಾರಿ ರಾ ಪಪ್ಪಾ ಮಮ್ಮಿಯನ್ನು ಚೆನ್ನಾಗಿ ನೋಡ್ಕೋತಿಯಾಲ್ಲಾ ಪ್ಲೀಸ್. ಐ ಲವ್ ಯೂ ಆಲ್. ನನ್ನ ಮಾನಸಿಕ ಸ್ಥಿತಿ ಸರಿಯಿಲ್ಲ. ಹೆಲ್ತ್ ಇಷ್ಯೂ ಇಲ್ಲ. ಆಂತರಿಕವಾಗಿ ನಾನು ನೋವನ್ನು ನುಭವಿಸುತ್ತಿದ್ದೇನೆ. ಹೀಗಾಗಿ ನಾನು ಈ ಹಾದಿ ತುಳಿಯುತ್ತಿದ್ದೇನೆ. ನಾನು ಇದನ್ನು ಮಾಡಿಕೊಳ್ಳಲು ಸಹ ಶಕ್ತಿ ಇಲ್ಲ. . ಪಪ್ಪಾ, ಮಮ್ಮೀ ನನ್ನ ಕಡೆಯಿಂದ ಕ್ಷಮೆ ಇರಲಿ. ನನಗೆ ಎಲ್ಲವನ್ನೂ ಕೊಟ್ಟ ನಿಮ್ಮ ಕ್ಷಮೆ ಕೋರುತ್ತೇನೆ” ಎಂದು ಡೆತ್ ನೋಟ್ ನಲ್ಲಿ ಸೌಜನ್ಯ ಬರೆದುಕೊಂಡಿದ್ದಾಳೆ. ಕಳೆದ ಮೂರು ದಿನದಿಂದಲೂ ಒಂದೊಂದು ಪುಟ ಡೆತ್ ನೋಟ್ ಬರೆದಿಟ್ಟಿರುವ ಸೌಜನ್ಯ ಗುರುವಾರ ತಾನು ತಂಗಿದ್ದ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಇವತ್ತು ಬರೆದಿರುವ ಪುಟದಲ್ಲಿ ಎಲ್ಲರನ್ನು ನೆನಪಿಸಿಕೊಂಡು ಕ್ಷಮೆ ಕಳಿದ್ದಾರೆ. ನನ್ನ ಡ್ರಾಮ ನಿಲ್ಲಿಸುತ್ತಿದ್ದೇನೆ ಎಂದು ಮಾರ್ಮಿಕವಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವಿಚಾರಣೆ: ಇನ್ನು ಸೌಜನ್ಯ ಫ್ಲಾಟ್ ನಲ್ಲಿ ಇದ್ದವರನ್ನು ಕುಂಬಳಗೋಡು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಆತ್ಮಹತ್ಯೆ ಮುನ್ನ ಬರೆದಿಟ್ಟಿರುವ ಡೆತ್ ನೋಟನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಡೆತ್ ನೋಟ್ ತಂದೆ ತಾಯಿಗೆ ಕ್ಷಮೆ ಕೇಳಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ, ನೈಜ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಸೌಜನ್ಯ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರಿಗೆ ಮಾಹಿತಿ : ಇನ್ನು ಸೌಜನ್ಯ ಅವರು ತಂಗಿದ್ದ ಪ್ಲಾಟ್ ಯಾರ ಹೆಸರಿನಲ್ಲಿದೆ. ಸೌಜನ್ಯ ಅವರೇ ಬಾಡಿಗೆಗೆ ವಾಸವಾಗಿದ್ದರೇ ? ಆತ್ಮಹತ್ಯೆ ಮುನ್ನ ಮೊಬೈಲ್ ನಲ್ಲಿ ಸಂವಹನ ಮಾಡಿರುವ ಸಂದೇಶಗಳ ಬಗ್ಗೆಯೇ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ.

error: Content is protected !!