ನಗರ ಸಭೆಗೆ ದಾಖಲೆ ಹಸ್ತಾಂತರ

ಮಡಿಕೇರಿ ನಗರಸಭೆ ವ್ಯಾಪ್ತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರ್ತಿಸಲಾಗಿರುವ (ಸರ್ವೇ ನಂ೨೦/೧) ಜಾಗದ ದಾಖಲೆಗಳನ್ನು ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಮತ್ತು ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರಿಗೆ ಸೋಮವಾರ ಹಸ್ತಾಂತರಿಸಲಾಯಿತು. ಜಿಲ್ಲಾಧಿಕಾರಿ ಅವರ ಆದೇಶದಂತೆ ಭೂದಾಖಲೆಗಳ ಇಲಾಖೆಯ ಕುಚೇಲ ಅವರು ನಗರಸಭೆ ಕಚೇರಿಯಲ್ಲಿ ಹಸ್ತಾಂತರಿಸಿದರು.

error: Content is protected !!