ನಗರದ ಸಮಸ್ಯೆಗಳನ್ನು ಮಳೆಗಾಲಕ್ಕೂ ಮುಂಚೆ ಬಗೆಹರಿಸುವಂತೆ ಕರವೇ ಮನವಿ

ಕೊಡಗು: ಇನ್ನೇನು ಕೆಲವೇ ದಿನಗಳಲ್ಲಿ ಕೊಡಗು ಜಿಲ್ಲೆಗೆ ಮಳೆಗಾಲ ಪ್ರಾರಂಭವಾಗಲಿದ್ದು ಮಡಿಕೇರಿ ನಗರ ಸಭೆ ವತಿಯಿಂದ ಮಡಿಕೇರಿ ನಗರದ ಎಲ್ಲ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿ ಪಡೆಸುವಂತೆ ಕರವೇ ಸಂಘಟನೆ ಆಗ್ರಸಿದ್ದಾರೆ

ಚರಂಡಿ ಹಾಗೂ ಕಾಡು ಕಡಿಯುವ ಕೆಲಸಗಳು ಹಾಗೂ ಬೀದಿ ದೀಪದ ವ್ಯವಸ್ಥೆಗಳು ಆದಷ್ಟು ಬೇಗ ಮಾಡಬೇಕಿದೆ ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳದೇವಿ ನಗರ ಹಾಗೂ ಜ್ಯೋತಿನಗರಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಚರಂಡಿಯಲ್ಲಿ ಬೆಳೆದಿರುವ ಕಾಡುಗಳನ್ನು ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿಕೊಡಬೇಕು ಹಾಗೆಯೇ ಮಡಿಕೇರಿ ನಗರದ ರಾಜಕಾಲುವೆಯನ್ನು ಸ್ವಚ್ಛಗೊಳಿಸಿ ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಿಕೊಡಬೇಕು.

ಈ ಕಾರ್ಯಕ್ಕೆ ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರುಗಳು ತಮ್ಮ ತಮ್ಮ ವಾರ್ಡ್ ಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಸಮಸ್ಯೆಗಳು ಕಂಡುಬಂದಲ್ಲಿ ನಗರ ಸಭೆಯ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿ ಕೊಡಬೇಕಾಗಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.

error: Content is protected !!