fbpx

ನಗರದಲ್ಲಿ ಹೆಚ್ಚುತ್ತಲೇ ಇದೆ ತ್ಯಾಜ್ಯದ ಸಮಸ್ಯೆ!

ಜಿಲ್ಲೆಯ ಜನತೆಗೆ ತಲೆ ನೋವಾಗಿದೆ ಸ್ವಚ್ಛತೆಯ ಕೊರತೆ…

ನಗರದಲ್ಲಿ ಕಸದ ತೊಟ್ಟಿಗಳನ್ನು ನಗರ ಸಭೆ ಇರಿಸುವುದನ್ನು ಬಿಟ್ಟ ಮೇಲೆ ನಗರದಲ್ಲಿ ತ್ಯಾಜ್ಯವನ್ನು ಬುದ್ಧಿ ಇರದ ಜನ ಎಲ್ಲೆಂದರಲ್ಲಿ ಹಾಕಲು ಶುರು ಮಾಡಿದ್ದಾರೆ. ಹಾಗಾಗಿ ದಿನೇದಿನೇ ಕಸದ ಸಮಸ್ಯೆ ನಗರದಲ್ಲಿ ತಲೆದೂರಿ ಗಂಭೀರವಾಗುತ್ತಿದೆ.

ಇದಕ್ಕೆ ತಾಜಾ ಉದಾಹರಣೆ ನಗರದ ಒಂದನೇ ವಾರ್ಡಿನ ಒಂಬತ್ತನೇ ಬ್ಲಾಕ್. ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಬಳಿಯ ಐ.ಟಿ.ಐ ಹಿಂಭಾಗದ ರಸ್ತೆಯ ತುಂಬಾ ಕಸದ ರಾಶಿ ಹರಡಿಕೊಳ್ಳುತ್ತಿದೆ. ಅನಾಗರಿಕ ಇಲ್ಲಿ ಬೇಕಾ ಬಿಟ್ಟಿ ಕಸ ತಂದು ಎಸೆಯುತ್ತಿದ್ದಾರೆ. ಹಾಗಾಗಿ ಇಲ್ಲಿ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಇಲ್ಲಿ ನಗರ ಸಭಾ ಸದಸ್ಯರು ಗಮನ ಹರಿಸಿ, ಸ್ವಚ್ಛಗೊಳಿಸಿ ಕೊಡುತ್ತಿದ್ದಾರೆಯಾದರೂ ಪುನಃ ಅನಾಗರೀಕರು ಕಸ ಎಸೆಯುತ್ತಿರುವುದರಿಂದ ಇಲ್ಲಿ ತ್ಯಾಜ್ಯದ ಸಮಸ್ಯೆ ತಲೆ ನೋವಾಗಿ ಪರಿಣಮಿಸಿದೆ.

ಈ ರೀತಿಯ ಸಮಸ್ಯೆ ಇತ್ತೀಚೆಗೆ ಹಲವೆಡೆ ತಲೆದೂರುತ್ತಿದ್ದು, ಈ ಕುರಿತು ನಗರ ಸಭೆ ಹಾಗು ಜಿಲ್ಲಾಡಳಿತ ಗಮನ ಹರಿಸಿ, ಕಠಿಣ ಕ್ರಮಗಳಿಗೆ ಮುಂದಾಗಬೇಕು. ಇಲ್ಲವಾದರೆ, ಮಡಿಕೇರಿ ಕೂಡ ಮುಂದೊಂದು ದಿನ ಗಾರ್ಬೇಜ್ ಸಿಟಿ ಆಗಿ ಬಿಡುವುದರಲ್ಲಿ ಅನುಮಾನವೇ ಇಲ್ಲ…!

error: Content is protected !!