ನಗರದಲ್ಲಿ ನೀರಿಗೆ ಬರ

ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿದೆ. ಪಂಚಾಯ್ತಿಗೆ ಸೇರಿದ ಹಲವೆಡೆ ಮೋಟಾರ್ ರಿಪೇರಿಯಾಗಿದ್ದು, ಕೊಳವೆ ಬಾವಿಗಳಲ್ಲಿ ಜಲಮಟ್ಟ ಕುಸಿತ ಉಂಟಾಗಿದೆ.

ಕಳೆದ 20 ದಿನಗಳಿಂದ ಗೋಣಿಕೊಪ್ಪಲು ನಗರದಲ್ಲಿ ನೀರಿನ ತೀವ್ರ ಕ್ಷಾಮ ಉಂಟಾದ ಪರಿಣಾಮ ಗ್ರಾಮ ಪಂಚಾಯಿತಿಯ ವತಿಯಿಂದ ಟ್ಯಾಂಕರ್ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ನೀರು ನಿರ್ವಾಹಕರ ಅಸಹಕಾರ ವರ್ತನೆಯೂ ಕೂಡಾ ಗೋಣಿಕೊಪ್ಪಲು ನಗರದಲ್ಲಿ ಹಲವೆಡೆ ಕೃತಕ ಜಲಕ್ಷಾಮಕ್ಕೆ ಕಾರಣ ಎನ್ನಲಾಗಿದ್ದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

error: Content is protected !!