ನಕ್ಷತ್ರ ಆಮೆ ಮಾರಾಟ ಯತ್ನ, ಆರೋಪಿಗಳ ಬಂಧನ


ಅಳಿವಿನ ಅಂಚಿನಲ್ಲಿರುವ ಅಪರೊಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಮಡಿಕೇರಿಯ ಸುದರ್ಶನ ವೃತ್ತದ ಬಳಿಯಲ್ಲಿ ಒಂದು ಆಮೆ ಜಾಲ ಭೇದಿಸಿದ ಅರಣ್ಯ ಇಲಾಖೆ, ಇದೀಗ ಕುಶಾಲನಗರದ ಗುಡ್ಡೆಹೊಸೂರುವಿನಲ್ಲಿ ಕೃಷ್ಣ ಮತ್ತು ದರ್ಶನ್ ಎಂಬಾತನನ್ನು ವಶಕ್ಕೆ ಪಡೆದು ಆಮೆಯನ್ನು ರಕ್ಷಿಸಲಾಗಿದೆ.
ಜೊತೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ಬದಿಯಲ್ಲಿ ಈರ್ವರನ್ನು ಬಂಧಿಸಿ ಜೀವಂತ ಆಮೆಯನ್ನು ರಕ್ಷಿಸಲಾಗಿದೆ