ನಕ್ಷತ್ರ ಆಮೆ ಮಾರಾಟ ಯತ್ನ: ಆರೋಪಿ ಬಂಧನ
ಮಡಿಕೇರಿ : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತ ಬಳಿ ನಕ್ಷತ್ರ ಆಮೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಯಾಸಿನ್ ಪಾಷ ಬಂಧಿತ ಆರೋಪಿಯಾಗಿದ್ದು, ಕಾರ್ಯಾಚರಣೆಯಲ್ಲಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪಿಎಸ್‌ಐ ಸಿ.ಯು. ಸವಿ, ಸಿಬ್ಬಂದಿ ಶೇಖರ್, ರಾಜೇಶ್, ರಾಘವೇಂದ್ರ ಯೋಗೇಶ್, ಮೋಹನ, ಸ್ವಾಮಿ ಪಾಲ್ಗೊಂಡಿದ್ದರು.