fbpx

ನಕಲಿ ಸ್ಯಾನಿಟೈಸರ್ ಉತ್ಪಾದನೆ ಜಾಲ ಪತ್ತೆ

ಬೆಂಗಳೂರು: ಇತ್ತೀಚೆಗೆ ಕೊರೋನಾ ವೈರಸ್ ಶಿಪ್ರ ಗತಿಯಲ್ಲಿ ಉಲ್ಪಣಗೊಳ್ಳುತ್ತಿರುವುದರಿಂದ ಸೋಪ್ ಹಾಗು ಸ್ಯಾನಿಟೈಸರ್ಗಳ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ನಕಲಿ ಸ್ಯಾನಿಟೈಸರ್ ಹಾವಳಿಯೂ ಹೆಚ್ಚಾಗಿದೆ. ಕೇಂದ್ರ ಅಪರಾಧ ಪತ್ತೆ ದಳದ ಆರ್ಥಿಕ ಅಪರಾಧದ ಪಡೆ ಇತ್ತೀಚೆಗೆ ನಕಲಿ ಸ್ಯಾನಿಟೈಸರ್ ಉತ್ಪಾದಿಸುತ್ತಿದ್ದ ಎರಡು ಕಾರ್ಖಾನೆಗಳ ಮೇಲೆ ದಾಳಿ ನಡೆಸಿ, 56 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಯಾನಿಟೈಸರ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

error: Content is protected !!