ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಕಿರಾತಕನ ಅರೆಸ್ಟ್

ಗುಜರಾತ್, ಅಕ್ಟೋಬರ್. 12 : ಝೀವಾ ಧೋನಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ದುಷ್ಟ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಾಣುತಿದ್ದ ಹಿನ್ನಲೆಯಲ್ಲಿ,ಕಿರಾತಕನೋರ್ವ ಝೀವಾ ಧೋನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಕಾಮೆಂಟ್ ಹಾಕಿದ್ದ.
ಗುಜರಾತ್ನ ಮುಂದ್ರಾ ಜಿಲ್ಲೆಯ ಕಚ್ ವಲಯದಲ್ಲಿನ 16 ವರ್ಷದ ಅಪ್ರಾಪ್ತನನ್ನು ಗುಜರಾತ್ ಪೊಲೀಸರು ವಶಕ್ಕೆ ಪಡೆದಿದ್ದು, ಅಪ್ರಾಪ್ತನಾದ ಕಾರಣ ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ವಶಕ್ಕೆ ಪಡೆದಿದ್ದೇವೆ. ಈಗಾಗಲೇ ಅಪ್ರಾಪ್ರ ತಪ್ಪನ್ನು ಒಪ್ಪಿಕೊಂಡಿದ್ದು ರಾಂಚಿ ಪೊಲೀಸರು ಆಗಮಿಸಿದ ಬಳಿಕ ಅವರಿಗೆ ಹಸ್ತಾಂತರಿಸಲಿದ್ದೇವೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.
ಬೆದರಿಕೆಯ ಹಿನ್ನೆಲೆಯಲ್ಲಿ ರಾಂಚಿಯ ಸಿಮ್ಲಿಯಾದಲ್ಲಿರುವ ಧೋನಿ ಫಾರ್ಮ್ ಹೌಸ್ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಐಟಿ ಸೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಹಾಕಿದವನನ್ನು ಪತ್ತೆ ಹಚ್ಚುವಂತೆ ಗುಜರಾತ್ ಪೊಲೀಸರಿಗೆ ಸೂಚನೆ ನೀಡಲಾಗಿತ್ತು.