fbpx

ದ.ಸಂ.ಸದಿಂದ ನಾರಾಯಣ ಗುರು ಅವರ ಜನ್ಮ ಜಯಂತಿ ಆಚರಣೆ

ನಾರಾಯಣ ಗುರು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಹಾಗು ಕೊರೋನಾ ವಾರಿಯಸ್೯ಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಹೆಚ್.ಎಲ್ ದಿವಾಕರ್ ಅವರು ಮಾತನಾಡಿ, ದಲಿತ ಮತ್ತು ಹಿಂದುಳಿತ ವರ್ಗದ ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಪಡೆಯುವಂತಾಗಬೇಕು. ಉನ್ನತ ಶಿಕ್ಷಣವನ್ನು ಪಡೆದು ದೊಡ್ಡ ಸ್ಥಾನವನ್ನು ಪಡೆಯುವಂತಾಗಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಮಡಿಕೇರಿ ನಗರ ಸಭೆ ಪೌರಾಯುಕ್ತರಾದ ಹೆಚ್.ವಿ ರಾಮ್ ದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಿಕ ಸಮಾನತೆಯ ಬದಲಾವಣೆ ಬರಲು ಸಮಾಜ ಸುಧಾರಕರೇ ಕಾರಣೀಕರ್ತರು. ನಾರಾಯಣ ಗುರು ಅವರಂತಹ ಮಹನೀಯರ ಸ್ಮರಣೆ ಮಾಡುವುದು ಅರ್ಥಪೂರ್ಣ ಎಂದರು.

ನಂತರ ಕಸಪದ ಮಾಜಿ ಅಧ್ಯಕ್ಷರಾದ ಟಿ ಪಿ ರಮೇಶ್ ಅವರು ನಾರಾಯಣ ಗುರು ಅವರ ಕುರಿತಾಗಿ ಹಲವಾರ ಪ್ರಮುಖ ವಿಚಾರಗಳನ್ನು ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ.ಕೆ.ರವೀಂದ್ರ ರೈ, ನಮ್ಮ ಕೊಡಗು ತಂಡದ ಸಂಸ್ಥಾಪನಾ ಅಧ್ಯಕ್ಷರಾದ ನೌಷದ್ ಜನ್ನತ್, ಡಿ.ಎಸ್.ಎಸ್ ತಾಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ ಅವರುಗಳು ಹಾಜರಿದ್ದರು.

ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳಿಗೆ ಹಾಗು ಕೊರೋನಾ ವಾರಿಯಸ್೯ಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

error: Content is protected !!