ದ್ವಿಚಕ್ರ ವಾಹನದಲ್ಲಿ ಶ್ರೀಗಂಧ ಮರ ಸಾಗಾಟ; ಆರೋಪಿ ಅಂದರ್

ಸೋಮವಾರಪೇಟೆ:- ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ಮರವನ್ನು ಸಾಗಾಟಗೊಳಿಸುತ್ತಿದ್ದ ಆರೋಪಿಯನ್ನು ಪೊಲೀಸ್ ಫಾರೆಸ್ಟ್ ಸ್ಕ್ವಾಡ್‌೯ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆಲೂರು ಸಿದ್ದಾಪುರದ ಹಿತ್ಲಗದ್ದೆ ನಿವಾಸಿ ಸುಂದರ್ ಎಂಬವರ ಪುತ್ರ ಸುಜಯ್ ಎಂಬಾತ ತನ್ನ ಬೈಕ್‌ನಲ್ಲಿ ೨೦ ಕೆ.ಜಿ.ಯಷ್ಟು ಶ್ರೀಗಂಧವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ಪೊಲೀಸ್ ಫಾರೆಸ್ಟ್ ಸ್ಕ್ವಾಡ್‌ನ ಸಿಬ್ಬಂದಿಗಳು, ಗೋಣಿಮರೂರು ಬಳಿಯಲ್ಲಿ ರೂ. ೧ ಲಕ್ಷ ಮೌಲ್ಯದ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಫಾರೆಸ್ಟ್ ಸ್ಕ್ವಾಡ್‌ನ ಜಿಲ್ಲಾ ವರಿಷ್ಠಾಧಿಕಾರಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಅಪ್ಪಾಜಿ, ಸಿಬ್ಬಂದಿಗಳಾದ ರಾಘವೇಂದ್ರ, ಯೋಗೇಶ್, ಶೇಖರ್, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!