ದೊಡ್ಡಳಿಲು ಬೇಟೆ: ಓರ್ವನ ಸೆರೆ

ಕೊಡಗು: ವಿರಾಜಪೇಟೆ ತಾಲ್ಲೂಕಿನ ಪಾಲಂಗಲ ಅರಣ್ಯದಲ್ಲಿ ಹಾರುವ ದೊಡ್ಡಳಿಲನ್ನು ಬೇಟೆಯಾಡಿ‌ ಮಾಂಸ ಮಾಡಿದ ಆರೋಪದಡಿಯಲ್ಲಿ‌ ವೀರಾಜಪೇಟೆ ವಲಯ ಅರಣ್ಯ ಇಲಾಖೆಯವರು ಓರ್ವನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆ ಪಾಲಂಗಾಲ ಗ್ರಾಮದ ಕುಲ್ಲಚಂಡ ಗಣೇಶ್ ರವರ ಲೈನ್ ಮನೆ ಮೇಲೆ ದಾಳಿ ಮಾಡಲಾಗಿ ಅಲ್ಲಿ ವಾಸವಿದ್ದ ಆರೋಪಿ ಅಯ್ಯಂಗೇರಿ ಗ್ರಾಮದ ಕೆ.ಎನ್. ಸುನಿಲ್ ಎಂಬಾತನನ್ನು ಬಂಧಿಸಿ ದೊಡ್ಡಳಿಲು ಮಾಂಸದ ಸಮೇತ ಕೃತ್ಯಕ್ಕೆ‌ ಬಳಸಿದ ಕೋವಿ ಹಾಗೂ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.‌ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಪಾಲಂಗಾಲ ಗ್ರಾಮದ‌ ಮೇದಪ್ಪ ,(ಹರೀಶ್) ಮತ್ತು ತೋರ ಗ್ರಾಮದ ಮುದ್ದು ಸೋಮಯ್ಯ ತಲೆಮರೆಸಿಕೊಂಡಿದ್ದಾರೆ.

error: Content is protected !!