ದೈವ ಕೋಲ, ಉತ್ಸವದಿಂದ ಗ್ರಾಮಗಳಲ್ಲಿ ಸಡಗರ ಸಂಭ್ರಮ

ಕುಶಾಲನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಇದೀಗ ಧರ್ಮ ದೈವಗಳ ನೇಮ, ಕೋಲಗಳು ಮೇಳೈಸುತ್ತಿದೆ.

ದೈವ ಕೋಲಗಳಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ.
ಈಗಾಗಲೇ ನಾಕೂರು ಶ್ರೀರಂಗಾಲದ ಮಂಜಿಕೆರೆಯಲ್ಲಿ ಕೊರಗಜ್ಜ ದೈವ ನೇಮ, ಗರಗಂದೂರು ಕುರಂಧ ಭಗವತಿ ಭದ್ರಕಾಳಿ ಉತ್ಸವ, ಹರದೂರಿನ ವಿಷ್ಣು ಮೂರ್ತಿ ಒತ್ತೆಕಾಲ,ಕುಲ್ಚಟ್ ದೈವ,ಗುಳಿಗನ ಕೋಲ ಹಾಗು ಕೆದಕಲ್ ಗ್ರಾಮದ ಏಳನೇ ಮೇಲ್ ಕೊರಗಜ್ಜ ನ ಕಲ್ಲುರ್ಟಿ, ಪಾಷಾಮೂರ್ತಿ ಸೇರಿದಂತೆ ಹಲವು ದೈವ ಕೋಲಗಳದ್ದೇ ಸದ್ದು…!

error: Content is protected !!