fbpx

ದೇಶವಾಸಿಗಳಿಗೆ ಒಗ್ಗಟ್ಟಿನ ಕರೆ ನೀಡಿದ ಮಾಜಿ ಪ್ರಧಾನಿ

ನವದೆಹೆಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತೀಯರಿಗೆ ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ‘ಭಾರತೀಯರೆಲ್ಲಾ ಜೊತೆಯಾಗಿ ನಿಂತು ಒಗ್ಗಟ್ಟನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ’ ಎಂದಿದ್ದಾರೆ.

ಮಾಜಿ ಪ್ರಧಾನಿ ‘ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳು, ನಡೆಗಳು ಮುಂದಿನ ಪೀಳಿಗೆಯ ಯುವ ಜನರ ಮೇಲೆ ಪರಿಣಾಮ ಬೀರಲಿದೆ. ತಂತ್ರಗಾರಿಕೆ ಹಾಗು ಭೌಗೋಳಿಕ ಆಸಕ್ತಿಯಿಂದ ಪ್ರಧಾನಿಗಳು ಪ್ರಜ್ಞಾಪೂರ್ವಕವಾಗಿ ಪ್ರಜಾಪ್ರಭುತ್ವದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.’ ಎಂದು ಅಭಿಮತ ಪಟ್ಟರು.

ಚೀನಾ ತನ್ನ ಕಾನೂನು ಬಾಹೀರ ಹಾಗು ಕುತಂತ್ರಗಳಿಂದ ಭಾರತದ ಗಲ್ವಾನ್ ವ್ಯಾಲಿ ಗಡಿಯಲ್ಲಿ ನಿರಂತರ ಅಶಾಂತಿ ಹಾಗು ಬಿಗುವಿನ ವಾತಾವರಣವನ್ನು ಅದಕ್ಕಾಗಿಯೇ ಸೃಷ್ಟಿಸಿ, ಉದ್ದೇಶಪೂರ್ವಕವಾಗಿ ಷಡ್ಯಂತರ ಮಾಡುತ್ತಲೇ ಇದೆ. ಕೇಂದ್ರ ಸರಕಾರ ಇದನ್ನು ಸಮರ್ಥವಾಗಿ ಎದುರಿಸಿ ದೇಶದ ಭಾವೈಕ್ಯತೆ ಹಾಗು ಸಾರ್ವಭೌಮತೆಯನ್ನು ಕಾಪಾಡಬೇಕಿದೆ ಎಂದು ಹೇಳಿದರು.

error: Content is protected !!