fbpx

ದೇಶಭಕ್ತಿಯನ್ನು ಪುಟಿದೆಬ್ಬಿಸುವ ಅರ್ಥಪೂರ್ಣ ತಾಣ

ಕಾರ್ಗಿಲ್ ವಿಜಯ್ ದಿವಸ್ ವಿಶೇಷ

ಕಾರ್ಗಿಲ್ ವಿಜಯ್ ದಿವಸದ ಪುತ್ಥಳಿಗಳಿಗೆ ಇವತ್ತು ಪುಷ್ಪಾರ್ಚನೆಯನ್ನ ಸರಳವಾಗಿ ಕುಶಾಲನಗರದ #ಲಕ್ಷಿನಾರಾಯಣರವರು (ನಾಣಿ)ನವರು ಇಂದು ನೆರೆವೇರಿಸಿದರು.

ಮಾರ್ಚ್ 23 ಭಗತ್ ಸಿಂಗರ ಜನ್ಮದಿನ,
ಭಗತ್ ಸಿಂಗರ ಸ್ಮರಣಾರ್ಥವಾಗಿ ಆ ದಿನದಂದು ಇದರ ಉದ್ಘಾಟನೆ ಅದ್ಧೂರಿಯಾಗಿ ನಡೆಸಬೇಕು ಎನ್ನುವ ತೀರ್ಮಾನವಾಗಿತ್ತು .
ದೇಶಭಕ್ತರ ಹಬ್ಬದಂತೆ ಸಂಭ್ರಮಿಸುವ ಒಂದಷ್ಟು ಪೂರ್ವತಯಾರಿ (ಬೈಕ್ ರಾಲಿಯ ಜೊತೆಗೆ ಮಗದೊಂದಿಷ್ಟು ದೇಶಭಕ್ತಿಯ ಸಿರಿಯನ್ನೇಚ್ಚಿಸುವ ಕಾರ್ಯಕ್ರಮ)ನಡೆಸಿದ್ದೆವು.
ಕೋವಿಡ್ 19ರ ದುರ್ದಿನದ ಸಂದರ್ಭ ಕೆಲಸದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಮತ್ತೂ ಸಾಮೂಹಿಕವಾಗಿ ಸೇರಿ ನಡೆಸುವ ಕಾರ್ಯಕ್ರಮಗಳು ಸ್ಥಗಿತಕೊಂಡ ಕಾರಣ
ಅದ್ಧೂರಿ ವೀರಜವಾನರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು.

ಕುಶಾಲನಗರ ರಸ್ತೆಯಿಂದ ಮೈಸೂರಿಗೆ ಸಂಚರಿಸುವ ರಾಷ್ಟ್ರಭಕ್ತ ಸ್ನೇಹಿತರೇ
ಕುಂದನಹಳ್ಳಿಯ ಈ ಕೂರ್ಗ್ ವಾಟರ್ ಪಾರ್ಕ್ ಗೆ ಒಮ್ಮೆ ಭೇಟಿಕೊಡಿ .
ಬರೀ ಮೋಜುಮಸ್ತಿ ಅಂತಲ್ಲ
ಅದರ ಬದಲಿಗೆ ರಾಷ್ಟ್ರಭಕ್ತರ ಕಾರ್ಖಾನೆಗೆ ಹೊಕ್ಕಿದಂತೆ ಭಾಸವಾಗುವುದರಲ್ಲಿ ಅಚ್ಚರಿಯೇ ಇಲ್ಲ.

ವಾಲ್ ಆಫ್ ದಿ ಹೀರೋಸ್
21 ಜನ ಪರಮವೀರ ಚಕ್ರ ಪುರಸ್ಕೃತರ ಮಾಹಿತಿ ದಾಖಲೆಗಳೊಂದಿಗೆ .
ಈ ನೆಲದ ಸ್ವಾತಂತ್ರ್ಯ ಕಲಿಗಳ ಬಗ್ಗೆ ಮಾಹಿತಿ
ಅಮರ್ ಜವಾನ್ ಸ್ಮಾರಕ , ಕಾರ್ಗಿಲ್ ವಿಜಯ್ ದಿವಸದ ವಿಜೃಂಭಿತ ವೀರ ಜವಾನರ ಪುತ್ಥಳಿಗಳು
ಗಗನದೆತ್ತರಕ್ಕೆ ಕೈಬೀಸಿ ಕರೆಯುವ ರಾಷ್ಟ್ರಧ್ವಜ .

ಬಿಡುವಿದ್ದರೆ ಒಮ್ಮೆ ಭೇಟಿ ಕೊಡಿ…

ಕೂರ್ಗ್ ವಾಟರ್ ಪಾರ್ಕ್
ಕುಂದನಹಳ್ಳಿ,
ಮೈಸೂರು ರಸ್ತೆ
ಕುಶಾಲನಗರ 571107
ಮೊ:09035202080

error: Content is protected !!