ದೇಶದ ರೈತರಿಗಗಾಗಿ ಪ್ರಧಾನಿ ವಿಶೇಷ ವಿಡಿಯೋ ಕಾನ್ಫರೆನ್ಸ್!

ದೆಹೆಲಿ: ದೇಶದ ವಿವಿಧ ರಾಜ್ಯಗಳ ರೈತ ಫಲಾನುಭವಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. ದೇಶದ 9 ಕೋಟಿ ರೈತರ ಬ್ಯಾಂಕ್ ಖಾತೆಗೆ 18 ಸಾವಿರ ಕೋಟಿ ಹಣ ಜಮಾ ಮಾಡಲಾಗಿದೆ ಎಂದರು.
ರಾಜ್ಯದ ರೈತರು ಸೇರಿದಂತೆ ಅರುಣಾಚಲಪ್ರದೇಶ, ಒಡಿಸಾ, ಹರ್ಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು

ರೈತರನ್ನು ಒಗ್ಗೂಡಿಸಿ, ರೈತರ ಅಭಿವೃದ್ಧಿ ಕುರಿತ ಚರ್ಚೆ ನಡೆಸಲಾಯಿತು. ಉಳುಮೆ,ಶುಂಠಿ,ನಿಂಬೆಹಣ್ಣು,ಧಾನ್ಯ,ಮೂಸಂಬಿ,ಬಟಾಣಿ,ಚೆನ್ನಾ,ಬೇಳೆ,ಸೋಯಾ ಬೀನ್,ಟೊಮೇಟೋ,ಹೂವು ಬೆಳೆಗಳ ಬಗ್ಗೆ ಚರ್ಚೆ ನಡೆಯಿತು. ಸರ್ಕಾರದ ಬೆಲೆ ಸಿಗುತ್ತಿದಗಯೇ? ಎಂದು ಪ್ರಶ್ನೆ ಮಾಡಿದ ರೈತರಿಗೆ ಉತ್ತರಿಸಿದರು.

ಪ್ರಧಾನಿ,ಫಸಲ್ ಭೀಮಾ ಯೋಜನೆ ಸದ್ಬಳಕೆ ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಮತ್ತು ಇಂದಿನ ಯೋಜನೆ ಉಪಯೋಗ ಹೇಗೆ ನಡೆಸುತ್ತಿದ್ದಾರೆ ಎಂದು ಪ್ರಶ್ನೆಗೆ ಮಾಹಿತಿಯನ್ನಿತ್ತರು. ಖಾಸಗಿ ದಲ್ಲಾಳಿಗಳಿಂದ ಆಗುತ್ತಿರುವ ದಬ್ಬಾಳಿಕೆಗಳ  ಬಗ್ಗೆ ಚರ್ಚೆ ಆಯಿತು.  ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಸಣ್ಣ ಪ್ರಮಾಣದ ಜಮೀನು ಹೊಂದಿದವರಿಗೆ ಪಶುಸಂಗೋಪನೆ ಮಾಡುವಂತೆ  ಸಲಹೆ ನೀಡಿದರು.
ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಕೃಷಿಗೆ ನೀರಿನ ಸಮಸ್ಯೆ ಬಗ್ಗೆ ಗಂಭೀರ  ಚರ್ಚೆ ಮಾಡಲಾಯಿತು. ನೀರು ಸಮಸ್ಯೆಯಿದ್ದರೆ, ಕಿರುನೀರಾವರಿ ಯೋಜನೆ ಬಳಸಿಕೊಳ್ಳಿ ಎಂಬ ಉಪಾಯ ಕೊಟ್ಟರು. ಜಮೀನಿನಲ್ಲಿ ನೀರು ಕಾಣಬೇಕೆಂದಿಲ್ಲ ,ಹನಿ ನಿರಾವರಿಯಿಂದಲೂ ಕೃಷಿ ಮಾಡಬಹುದು ಪ್ರಧಾನಿ ಸಲಹೆ ನೀಡಿದರು.

ಗ್ರಾಮದ ರೈತರನ್ನು ಒಟ್ಟಗೂಡಿಸಿ,ಸಹಬಾತಳ್ವೆ ಇದ್ದರೆ ಗ್ರಾಮ,ರೈತ ಅಭಿವೃದ್ಧಿ ಹೊಂದುವುದರ ಜೊತೆ ದೇಶ ಅಭಿವೃದ್ಧಿ ಸಾಧ್ಯ. ಕೃಷಿ ಕ್ಷೇತ್ರವೂ ಉನ್ನತಿ ಹೊಂದುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಅಟಲ್ ಬಿಹಾರ್ ವಾಜಪೇಯಿ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ. ನಿನ್ನ ಕೆಲಸ ಸರಿಯಾಗಿ ಮಾಡು ದೇಶ ಉದ್ಧಾರವಾಗುತ್ತದೆ, ಇದು ಮಹಾಭಾರತದಲ್ಲಿ ಉಲ್ಲೇಖಿಸಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್,ಅಂತ್ಯೋಧ್ಯದಂತಹಾ ಕೊಡುಗೆ ನೀಡಿದ್ದಾರೆ. ನಿಮ್ಮ ಜಮೀನಿಗೆ ಇಳಿಯುವ ಮೊದಲು ಅಟಲ್ ಯೋಜನೆ ನೆನಪಾಗಬೇಕು.
ಕೃಷಿಗೆ ಹಾಕಿದ ಸಂಪೂರ್ಣ ಹಣ ಎಲ್ಲವೂ ನಿಮ್ಮದು ಎನ್ನುವಷ್ಟರ ಮಟ್ಟಕ್ಕೆ ಈ ಯೋಜನೆ ನಡೆಯಲಿದೆ.
ಕಮಿಷನ್ ದಂಧೆಗೆ ಸಿಲುಕಬೇಡಿ ತಂತ್ರಜ್ಜಾನ ನಿಮ್ಮ ಪರವಿದೆ.

ಪಶ್ಚಿಮ ಬಂಗಾಳದ ಸರ್ಕಾರದ ರೈತರಿಗೆ ಹಣ ಸಿಗದಿರಲು ಅಲ್ಲಿನ ಆಡಳಿತವೇ ಕಾರಣ,ಅಲ್ಲಿನ ಸರ್ಕಾರಕ್ಕೆ ಹಣ ನೀಡಲು ಕೇಂದ್ರ ನೀಡಲು ಸಿದ್ಧವಿದೆ, ಮಮತಾ ಬ್ಯಾನರ್ಜಿ ಸರ್ಕಾರದ ರಾಜಕಾರಣದರಿಂದ ರೈತರು ಅನನೂಕೂಲಕ್ಕೆ ಈಡಾಗಿದ್ದರು, ಇದೀಗ ಅಲ್ಲಿನ ಸಮಸ್ಯೆ ಬಗೆಹರಿದಿದೆ, ಪಶ್ಚಿಮ ಬಂಗಾಲದಿಂದ ಪಂಜಾಬಿಗೆ ಶಿಫ್ಟ್ ಆಗಿದೆ.

ಕೇರಳದಲ್ಲಿ ಎಪಿಎಂಸಿ,ಮಂಡಿ ಇಲ್ಲ ಅವರೇಕೆ ಪ್ರತಿಭಟಿಸುತ್ತಿಲ್ಲ,ಅಲ್ಲಿನ ನೀತಿ ರೈತರ ಪರವಾಗಿದೆ. ಸರ್ಕಾರದ ಯೋಜನೆ ಬಗ್ಗೆ ರೈತರು ಅರಿವು ಮೂಡಿಸಿಕೊಳ್ಳಬೇಕು. ಕಮಿಷನ್ ವ್ಯವಸ್ಥೆ ಗೆ ಕಡಿವಾಣ ಹಾಕುತ್ತೇವೆ. ರೈತರ ಸಂಖ್ಯೇಯೆನು ಕಡಿಮೆಯಿಲ್ಲ.

error: Content is protected !!