ದೇಶದಾದ್ಯಂತ ದಾಳಿ ನಡೆಸುವುದಾಗಿ ಅಲ್ಖೈದಾ ಉಗ್ರರ ಬೆದರಿಕೆ ಪತ್ರ ರವಾನೆ

ದೆಹಲಿ: ದೆಹಲಿ, ಮುಂಬೈ, ಗುಜರಾತ್,ಉತ್ತರಪ್ರದೇಶದ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಗುಂಪು ಅಲ್ಖೈದಾ ಎಚ್ಚರಿಕೆ ಪತ್ರ ರವಾನಿಸಿದೆ.
ಪತ್ರದಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ಬೆದರಿಕೆ ನೀಡಿದೆ. ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲದೆ ಬಿಡುವುದಿಲ್ಲ, ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದೆ.