ದೇವಾಲಯದ ಆಸುಪಾಸಿನಲ್ಲಿ ಹುಲಿರಾಯ ಪ್ರತ್ಯಕ್ಷ!!

ಚಾಮರಾಜನಗರ: ಅಚ್ಚರಿಯಾದರೂ ಸತ್ಯ ,ಬಂಡೀಪುರ ಹುಲಿ ಸಂರಕ್ಷಿತಾ ವಲಯ ವ್ಯಾಪ್ತಿಯ ಜಿಲ್ಲೆಯ ಹೆಸರಾಂತ ದೇವಾಯಲದಲ್ಲಿ ಒಂದಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಬದಿಯಲ್ಲೇ ಗಂಡು ಹುಲಿಯೊಂದು ದಿನನಿತ್ಯ ಪ್ರತ್ಯಕ್ಷವಾಗುತ್ತಿದೆ.ಇಲ್ಲಿನ ಹುಲ್ಲುಗಾವಲಿನಲ್ಲಿ ಅಲೆದಾಡುವ ದೃಶ್ಯ ಆಗಿಂದಾಗ್ಗೆ ಪ್ರವಾಸಿಗರು ಮತ್ತು ಭಕ್ತರಿಗೆ ಕಂಡು ಬರುತ್ತಿದೆ.ವನ್ಯಜೀವಿ ಮತ್ತು ಪ್ರವಾಸಿಗರಿಗೆ ಸ್ವಚ್ಚಂದವಾಗಿ ಓಡಾಡುವ ಹುಲಿರಾಯನನ್ನು ನೋಡಿ ಸಂತಸ ಉಂಟಾಗಿದೆ.ಬೆಟ್ಟದ ಪಕ್ಕದಲ್ಲಿಯೇ ಹುಲಿಗಳಿಗೆ ಪೂರಕ ವಾತಾವರಣವಿದೆ,ನೀರಿನ ಕೊಳ,ಕುರುಚಲು ಕಾಡು,ಕಲ್ಲು ಬಂಡೆಗಳು,ಅಡ್ಡಾಡಲು ವಿಶಾಲವಾದ ಹುಲ್ಲುಗಾವಲು.ದೇವಾಲಯದ ಅರ್ಚಕರ ಪ್ರಕಾರ ಹಲವು ಬಾರಿ ಹುಲಿ ದೇವಾಲಯ ಸಮೀಪದಲ್ಲೇ ಓಡಾಡಿರುವುದನ್ನು ಗಮನಿಸಿದ್ದು ಯಾರಿಗೂ ತೊಂದರೆ ನೀಡುತ್ತಿಲ್ಲ ಎಂದಿದ್ದಾರೆ.ಕೆಲವು ವರ್ಷಗಳ ಹಿಂದೆ ಕಾಡಾನೆಯೊಂದು ದಿನನಿತ್ಯ ದೇವಾಲಯದ ಆವರಣಕ್ಕೆ ಬಂಂದು ಪ್ರಸಾದ ಸೇವಿಸುತ್ತಿದ್ದದನ್ನು ಇಲ್ಲಿ ಸ್ಮರಿಸಬಹುದು.

error: Content is protected !!