fbpx

ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಬಂಧನ

ಕುಶಾಲನಗರದ ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕಾಣಿಕೆ ಡಬ್ಬವನ್ನು ಮಹಿಳೆಯ ವೇಶ ಧರಿಸಿದ್ದ ವ್ಯಕ್ತಿಯೊಬ್ಬ ಹಾರೆಯಲ್ಲಿ ಮೀಟಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೂಡುಮಂಗಳೂರಿನ ನಿವಾಸಿಯಾದ ಮಹಮದ್ ಗೌಸ್ ಎಂಬಾತ ಈ ಕೃತ್ಯ ಎಸಗಿದ್ದು ಬಂಧಿತ ಆರೋಪಿಯಾಗಿದ್ದಾನೆ. ಮಹಿಳೆಯರ ಚೂಡಿದಾರ ಧರಿಸಿ ದೇವಾಲಯಕ್ಕೆ ಪ್ರವೇಶಿಸುತ್ತಿದ್ದ ಮಹಮದ್ ಗೌಸ್ ಹೊಂಚು ಹಾಕಿ ದೇವಾಲಯದ ಬಾಗಿಲು ಹಾಕಿದ ನಂತರ ಈ ಕೃತ್ಯ ನಡೆಸುತ್ತಿದ್ದ, ಈಗಾಗಲೇ ನಾಲ್ಕು ಕಳ್ಳತನ ಪ್ರಕರಣ ಮಹಮದ್ ಗೌಸ್ ಮೇಲಿದೆ.

error: Content is protected !!