fbpx

ದೇವರ ಬನದಲ್ಲಿ ಗುಂಡಿನೇಟು!

ದೇವರ ಬನದಲ್ಲಿ ಪೂಜೆ ವಿಚಾರಕ್ಕೆ‌ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನಿಂದ ಗುಂಡಿನ ದಾಳಿ ನಡೆದಿದ್ದು, ಮೂವರಿಗೆ ಗಾಯಗಳಾಗಿವೆ.

ಸೋಮವಾರಪೇಟೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರಿವಾಲ್ವರ್ ನಿಂದ ವೀರೇಶ್ ಎಂಬಾತ ಗುಂಡು ಹಾರಿಸಿದ್ದಾನೆ. ಸ್ಥಳೀಯರಾದ ಮಹೇಶ, ನಂದೀಶ್, ಚಂದ್ರಶೇಖರ ಎಂಬವರಿಗೆ ಗಾಯಗಳಾಗಿವೆ. ಈ ಸಂದರ್ಭ ಸ್ಥಳೀಯರಿಂದ ವೀರೇಶ್ ಮೇಲೆ ಹಲ್ಲೆಮಾಡಲಾಗಿದೆ.ಎಲ್ಲಾ ಗಾಯಾಳುಗಳನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇವರ ಪೈಕಿ ಮಹೇಶ್ ಗೆ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

error: Content is protected !!