ದುಶ್ಕರ್ಮಿಗಳಿಂದ ವಿಗ್ರಹ ಧ್ವಂಸ!

ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಬಳಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ವಿಷ್ಣುಮೂರ್ತಿ, ಶಾಸ್ತ, ಗುಳಿಗ ವಿಗ್ರಹವನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ದೇವಾಲಯ ಜೀರ್ಣೋದ್ಧಾರ ಸಮಿತಿ ಪೊಲೀಸರಿಗೆ ದೂರು ಸಲ್ಲಿಸಿದೆ.
ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರದ ಕಾಮಗಾರಿ ನಡೆಯುತ್ತಿದ್ದು, ಈ ದೇವಾಲಯದ ಸಮೀಪದಲ್ಲಿ ಶ್ರೀವಿಷ್ಣುಮೂರ್ತಿ, ಶಾಸ್ತ, ಗುಳಿಗನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವಿಗ್ರಹವನ್ನು ಬುಧವಾರ ರಾತ್ರಿ ಯಾರೋ ಧ್ವಂಸಗೊಳಿಸಿದ್ದಾರೆ ಎಂದು ದೇವಾಲಯ ಜೀಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಖಜಾಂಚಿ ಎಸ್.ಜಿ.ಶ್ರೀನಿವಾಸ್ ಹಾಗೂ ಸಮಿತಿ ಸಮಿತಿ ಸದಸ್ಯ ಆರ್. ರಮೇಶ್‍ಪಿಳ್ಳೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.