ದುಬಾರೆ ಸಾಕಾನೆ ಶಿಬಿರಕ್ಕೆ “ಕುಶ” ವಾಪಸ್

ದುಬಾರೆ ಸಾಕಾನೆ ಶಿಬಿರದಿಂದ ಬಂಡೀಪುರಕ್ಕೆ ಸ್ಥಳಾಂತರಗೊಂಡಿದ್ದ ಕುಶ ಸಾಕಾನೆ ಮತ್ತೆ ತನ್ನ ತವರು ಶಿಬಿರಕ್ಕೆ ವಾಪಸ್ಸಾಗಿದೆ.ಪುಂಡಾನೆ ಕುಶ ಇತ್ತೀಚೆಗೆ ವಿರುದ್ಧವಾಗಿ ಬಂಡೀಪುರಕ್ಕೆ ಸ್ಥಳಾಂತರಿಸಲು ಸರ್ಕಾರ ಅರಣ್ಯ ಇಲಾಖೆಗೆ ಆದೇಶದ ಹಿನ್ನಲೆಯಲ್ಲಿ ಬಿಡಲಾಗಿತ್ತು.

ಆದರೆ ಇದೀಗ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಾಕಾನೆ ಶಿಬಿರದಿಂದ ನೂರಕ್ಕೂ ಹೆಚ್ಚು ಕಿಲೋಮೀಟರ್ ಕಾಡಾನೆಗಳ ಜೊತೆಗೂಡಿ ದುಬಾರೆಗೆ ಆಗಮಿಸಿದೆ. ತನಗೆ ಅಳವಡಿಸಿದ್ದ ರೆಡಿಯೋ ಕಾಲರ್ ಮೂಲಕ ಅರಣ್ಯ ಇಲಾಖೆಗೆ ದುಬಾರೆಯತ್ತ ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.