ದುಬಾರೆ ರಿವರ್ ರಾಫ್ಟ್ ಮತ್ತೆ ಸ್ಥಗಿತ

ಕೊಡಗು: ಕೋವಿಡ್ ಮಾರ್ಗಸೂಚಿ ಅನ್ವಯ ಮತ್ತೆ ದುಬಾರೆಯ ಜಲಕ್ರೀಡೆಗೆ ನಿರ್ಬಂಧ ಹೇರಲಾಗಿದೆ.

ದುಬಾರೆಯಲ್ಲಿ ರಾಫ್ಟಿಂಗ್ ಕ್ರೀಡೆ ಸ್ಥಗಿತಗೊಳಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸೂಚನೆ ನೀಡಿದೆ ಆ ಹಿನ್ನಲೆಯಲ್ಲಿ ಕೇವಲ 10 ದಿನಗಳ ಹಿಂದೆಯಷ್ಟೇ ಆರಂಭಗೊಂಡಿದ್ದ ರಾಫ್ಟಿಂಗ್ ಇದೀಗ ಮತ್ತೆ ಸ್ಥಗತ ಗೊಂಡಿರುವುದು ರಾಫ್ಟಿಂಗ್ ಮಾಲೀಕರು ಮತ್ತು ಕಾರ್ಮಿಕರಲ್ಲಿ ಅಸಮಧಾನ ಮೂಡಿಸಿದೆ. ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳಲು ದುಬಾರೆ ರಾಫ್ಟಿಂಗ್ ಮಾಲೀಕರು ನಿರ್ಧಾರಿಸಿದ್ದಾರೆ.

error: Content is protected !!