ದುಬಾರೆ ರಿವರ್ ರಾಫ್ಟಿಂಗ್ ಪುನರಾರಂಭ

ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ಕಾರಣದಿಂದ ಸ್ಥಗಿತಗೊಂಡಿದ್ದ ದುಬಾರೆ ರಿವರ್ ರಾಫ್ಟಿಂಗ್ ಪುನರಾರಂಭಗೊಂಡಿದ್ದು, ಜಲಕ್ರೀಡೆಯಲ್ಲಿ ತೊಡಗಲು ವಿವಿಧ ಭಾಗಗಳಿಂದ ಪ್ರವಾಸಿಗರು ದುಬಾರೆಯತ್ತ ಲಗ್ಗೆ ಇಡುತ್ತಿದ್ದಾರೆ.
ಪ್ರಕೃತಿ ವಿಕೋಪ,ಕೋವಿಡ್ ನಿಂದ ದುಬಾರೆಯ ಜಲಕ್ರೀಡೆ ಕಳೆಗುಂದಿತ್ತು, ಇದೀಗ ದುಬಾರೆಯ ರಿವರ್ ರಾಫ್ಟಿಂಗ್ ತನ್ನ ಹಳೇ ಗತವೈಭವವಕ್ಕೆ ಮರಳಿದ್ದು, ದುಬಾರೆಯ ಜಲಕ್ರೀಡೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬೆಳಗ್ಗೆ 9.30 ಇಂದ ಸಂಜೆ 4.30 ರವರ ವರೆಗೆ ರಾಫ್ಟಿಂಗ್ ನಡೆಸಲಾಗುತ್ತಿದ್ದು ಒಟ್ಟು 35 ಮಾಲೀಕರ 65 ಬೋಟ್ ಗಳು ಲಭ್ಯವಿದೆ.