ದುಬಾರೆ ಆನೆ ಶಿಬಿರದಲ್ಲಿ ಟಫ್ ಮುನ್ನೆಚ್ಚರಿಕೆ

ಕೊಡಗು: ಜಿಲ್ಲೆಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ದುಬಾರೆ ಆನೆ ಶಿಬಿರದಲ್ಲಿ ಕೊರೊನಾ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಕಳೆದ ಬಾರಿಯಿಂದಲೇ ಪ್ರವಾಸಿಗರಿಗೆ ನಿರ್ಭಂದ ಹೇರಿದ್ದ ಬೆನ್ನಲ್ಲೇ ಈ ಬಾರಿಯೂ ಮುಂದುವರೆಸಲಾಗಿದ್ದು, ಮಾವುತರ ಕುಟುಂಬಕ್ಕೆ ಸೋಂಕು ಹರಡದಂತೆ ಎಚ್ಚರವಹಿಸಲಾಗಿದ್ದು ಆಯಾ ಆನೆಗಳ ಮಾವುತರು ತಮ್ಮ ಮನೆಯ ಬಳಿಯಲ್ಲೇ ಕಟ್ಟಿಹಾಕಿ ಆಹಾರ ನೀಡುವುದನ್ನು ನಿಲ್ಲಿಸಿದ್ದು ಆಹಾರ ನೀಡುವ ಸ್ಥಳಕ್ಕೆ ಕರೆತಂದು ಅಂತರ ಕಾಯ್ದಕೊಂಡು ಆಹಾರ ನೀಡಿದ ಬಳಿಕ ಶಿಬಿರದಲ್ಲೇ ಮೇಯಲು ಬಿಡಲಾಗುತ್ತಿದೆ.

ಉಳಿದವರು ಆನೆಗಳ ಬಳಿ ಸುಳಿಯದಿರುವುದು ಮತ್ತು ಸಿಬ್ಬಂದಿಗಳಿಗೆ ಲಸಿಕೆಗಳನ್ನು ನೀಡುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.

ಶಿಬಿರದಲ್ಲಿ ನಿತ್ಯದ ದಿನಚರಿ ಎಂದಿನಂತೆ ಮುಂದುವರೆದಿದ್ದು ಇರುವ 29 ಸಾಕಾನೆಗಳು ಆರೋಗ್ಯವಂತಾಗಿದೆ ಎಂದು ಶಿಬಿರದ ಮೇಲ್ವಿಚಾರಕ ಫಾರೆಸ್ಟರ್ ದಂಜನ್ ತಿಳಿಸಿದ್ದಾರೆ.

error: Content is protected !!